ಬುಧವಾರ, ನವೆಂಬರ್ 20, 2019
21 °C
1993ರ ಮುಂಬೈ ಸ್ಫೋಟ ಪ್ರಕರಣ

ಶರಣಾಗಲು ಕಾಲಾವಕಾಶ

Published:
Updated:

ನವದೆಹಲಿ (ಪಿಟಿಐ): 1993ರ ಮುಂಬೈ ಸ್ಫೋಟ ಪ್ರಕರಣದ ಇನ್ನೂ ಏಳು ಅಪರಾಧಿಗಳಿಗೆ ಶರಣಾಗಲು ಒಂದು ತಿಂಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್ ಗುರುವಾರ ನೀಡಿದೆ. ಇದಕ್ಕೆ ಮುನ್ನ ಬುಧವಾರವಷ್ಟೇ ಇದೇ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವ ನಟ ಸಂಜಯ್ ದತ್ ಅವರಿಗೆ ಶರಣಾಗಲು ಒಂದು ತಿಂಗಳ ಕಾಲಾವಕಾಶವನ್ನು ನ್ಯಾಯಾಲಯ ನೀಡಿತ್ತು.70 ವರ್ಷದ ಜೈಬುನ್ನೀಸಾ ಅನ್ವರ್ ಕಾಜಿ, ಸಂಜಯ್ ದತ್ ಅವರ ಗೆಳೆಯ ಯೂಸುಫ್ ಮೊಹ್ಸಿನ್ ನುಲ್‌ವಾಲಾ, ಅಬ್ದುಲ್ ರಜಾಕ್ ಮೆಮನ್, ಅಲ್ತಾಫ್ ಅಲಿ ಸಯೇದ್, ಇಸಾಕ್ ಮೊಹಮ್ಮದ್ ಹಜ್‌ವಾನೆ, ಶರೀಫ್ ಅಬ್ದುಲ್ ಗಫೂರ್ ಪಾರ್ಕರ್ ಅಲಿಯಾಸ್ ದಾದಾಬಾಯಿ ಮತ್ತು ಕೇಸರಿ ಆದಾಜಾನಿಯಾ ಈಗ ಕಾಲಾವಕಾಶ ಪಡೆದಿರುವ ಅಪರಾಧಿಗಳಾಗಿದ್ದಾರೆ.

ಪ್ರತಿಕ್ರಿಯಿಸಿ (+)