ಶರಣ ಕಲಾ ಸಂಗ್ರಹಾಲಯ ಉದ್ಘಾಟನೆ

7

ಶರಣ ಕಲಾ ಸಂಗ್ರಹಾಲಯ ಉದ್ಘಾಟನೆ

Published:
Updated:

ಕೂಡಲಸಂಗಮ: `ಶರಣರ 15 ಸಾವಿರ ವಚನಗಳುಳ್ಳ 15 ಸಂಪುಟಗಳನ್ನು ಇಲಾಖೆ ಪ್ರಕಟಿಸುತ್ತಿದೆ. ಒಟ್ಟು 36 ಸಾವಿರ ವಚನಗಳನ್ನು ಪ್ರಕಟಿಸುವ ಯೋಜನೆಯನ್ನು ಇಲಾಖೆಯು ಹಮ್ಮಿಕೊಂಡಿದೆ` ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಗೋವಿಂದ ಕಾರಜೋಳ ಹೇಳಿದರು.ಗುಂಡನಪಲ್ಲೆ ಬಸವ ಕಲಾನಿಕೇತನ ಸಂಘ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ  ಶರಣ ಕಲಾ ಸಂಗ್ರಹಾಲಯ ಉದ್ಘಾಟಿಸಿ ಮಾತನಾಡಿದರು.ಬಸವಣ್ಣನವರ ತತ್ವ-ಸಂದೇಶಗಳನ್ನು ವಿಶ್ವಕ್ಕೆ ಪರಿಚಯಿಸುವ ಉದ್ದೇಶದಿಂದ ಅವರ ವಚನಗಳನ್ನು ದೇಶದ ಎಲ್ಲ ಭಾಷೆಗಳಲ್ಲಿ ಹಾಗೂ ವಿವಿಧ ದೇಶದ ಭಾಷೆಗಳಲ್ಲಿ ಪ್ರಕಟಿಸುವ ಕಾರ್ಯ ಹಮ್ಮಿಕೊಳ್ಳಲಾಗಿದೆ. ಈಗಾಗಲೇ 2500 ವಚನಗಳನ್ನು ದೇಶದ 10 ಭಾಷೆಗಳಲ್ಲಿ ಮುದ್ರಣ ಮಾಡಲಾಗಿದ್ದು ಜನವರಿ 15ರ ಒಳಗೆ ಈ ಪುಸ್ತಕ ಬಿಡುಗಡೆ ಮಾಡಲಾಗುವುದು.  ಅಲ್ಲದೆ ವಿವಿಧ ದೇಶದ 22 ಭಾಷೆಗಳಲ್ಲಿ ವಚನಗಳನ್ನು ರಾಜ್ಯ ಸರಕಾರ ಪ್ರಕಟಿಸುತ್ತಿದೆ. ಈ ಸಮಾರಂಭಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಲಾಗುವುದು ಎಂದು ಕಾರಜೋಳ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry