ಶರಣ ಸಂಸ್ಕೃತಿ ಇಂದಿನಿಂದ

7

ಶರಣ ಸಂಸ್ಕೃತಿ ಇಂದಿನಿಂದ

Published:
Updated:

ನಗರದಲ್ಲಿ ನಾಲ್ಕು ದಿನಗಳ ಉತ್ಸವ

ಹಾವೇರಿ: ‘ಜಗದ್ಗುರು ನೈಘಂಟಿನ ಸಿದ್ಧಬಸವ ಮುರುಘರಾಜೇಂದ್ರ ಶ್ರೀಗಳ ಹಾಗೂ ಅಥಣಿ ಮುರುಘೇಂದ್ರ ಶಿವಯೋಗಿಗಳ ಸ್ಮರಣೋತ್ಸವ ಅಂಗವಾಗಿ ‘ಶರಣ ಸಂಸ್ಕೃತಿ ಉತ್ಸವ 2011’ ಫೆ.1ರಿಂದ 4 ರವರೆಗೆ ನಾಲ್ಕು ದಿನಗಳ ಕಾಲ ನಗರದ ಹೊಸಮಠ ಕಾಲೇಜು ಆವರಣದಲ್ಲಿ ನಡೆಯಲಿದೆ’ ಎಂದು ಹೊಸಮಠದ ಬಸವಶಾಂತಲಿಂಗ ಶ್ರೀಗಳು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.ಚಿತ್ರದುರ್ಗದ ಮುರುಘಾಮಠದ ಬಸವಕೇಂದ್ರದ ಡಾ. ಶಿವಮೂರ್ತಿ ಮುರುಘಾ ಶರಣರ ಅಧ್ಯಕ್ಷತೆಯಲ್ಲಿ, ಹೊಸಮಠದ ಬಸವ ಶಾಂತಲಿಂಗ ಶ್ರೀಗಳ ನೇತೃತ್ವದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ 9 ಗಂಟೆವರೆಗೆ ಶ್ರೀಮಠದಲ್ಲಿ ಸಹಜ ಶಿವಯೋಗ, ಸಂಜೆ 6.30ಕ್ಕೆ ಜಮುರಾ ಕಲಾವಿದರಿಂದ ವಚನ ಸಂಗೀತ ಹಾಗೂ ‘ಡಾ.ಶಿಮುಶಶ್ರೀ ಪ್ರಶಸ್ತಿ’ ಪ್ರದಾನ ನಡೆಯಲಿದೆ ಎಂದರು.ಫೆ.1 ರಂದು ಸಂಜೆ 6.30ಕ್ಕೆ ನಾಟಕೋತ್ಸವದ ಉದ್ಘಾಟನೆ ನೆರವೇರಲಿದೆ. ಅಂಗಡಿ ಸಂಗನಬಸವ ಶ್ರೀಗಳು, ಕರ್ಜಗಿ ಗೌರಿಮಠ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ನಾಟಕೋತ್ಸವವನ್ನು ಶಾಸಕ ಬಿ.ಸಿ.ಪಾಟೀಲ ಉದ್ಘಾಟಿಸಲಿದ್ದಾರೆ. ಸಂಸದ ಶಿವಕುಮಾರ ಉದಾಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಸೇರಿದಂತೆ ಅನೇಕರು ಅತಿಥಿಗಳಾಗಿ ಆಗಮಿಸಲಿದ್ದಾರೆ. ನಂತರ ಜಮುರಾ ತಂಡದಿಂದ ‘ಬಯಲುಕಟ್ಟೆಪುರಾಣ’ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಹೇಳಿದರು.ಫೆ .2 ರಂದು ಸಂಜೆ 6.30ಕ್ಕೆ ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯಲಿದ್ದು, ಹಾವನೂರು ಮಠದ ಸಿದ್ಧಲಿಂಗ ಶ್ರೀಗಳು, ಕೂಡಲದ ಗುರು ನಂಜೇಶ್ವರ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಶಾಸಕ ನೆಹರೂ ಓಲೇಕಾರ ಹಾಗೂ ಇತರರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಂತರ ‘ಕಾಯಕಯೋಗಿ ಸಿದ್ಧರಾಮ’ ನಾಟಕ ಪ್ರದರ್ಶನವಾಗಲಿದೆ ಎಂದು ತಿಳಿಸಿದರು.ಫೆ.3 ರಂದು ಬೆಳಿಗ್ಗೆ 7-30ಕ್ಕೆ ಶಿವಮೂರ್ತಿ ಮುರುಘಾ ಶರಣರಿಂದ ಸಹಜ ಶಿವಯೋಗ ನಡೆಯಲಿದೆ. ಸವಣೂರಿನ ದೊಡ್ಡ ಹುಣಸೇಮರದ ಚನ್ನಬಸವ ಶ್ರೀಗಳು, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ. ಜಿಲ್ಲಾ ಸೆಷನ್ ನ್ಯಾಯಾಧೀಶ ಕೆ.ಸಿ.ರಾಮಕೃಷ್ಣಯ್ಯ ಕುರಿ ಮತ್ತು ಉಣ್ಣೆ ನಿಗಮದ ಅಧ್ಯಕ್ಷ ಭೋಜರಾಜ ಕರೂದಿ ಸೇರಿ ಮತ್ತಿತರರು ಮುಖ್ಯ ಅತಿಥಿಗಳಾಗಿ ಆಗಮಿ ಸಲಿದ್ದಾರೆ. ಇದೇ ಸಂದರ್ಭದಲ್ಲಿ ಸಾಧಕರ ಸನ್ಮಾನ ನಡೆಯಲಿದೆ ಎಂದು ತಿಳಿಸಿದರು.ಫೆ.4 ರಂದು ಬೆಳಿಗ್ಗೆ 7.30ಕ್ಕೆ ಸಹಜ ಶಿವಯೋಗ ಹಾಗೂ ಸನ್ಮಾನ ಕಾರ್ಯಕ್ರಮ ಜರುಗಲಿದ್ದು, ಮಧ್ಯಾಹ್ನ 12 ಗಂಟೆಗೆ ಜಿಲ್ಲಾ ಕಾರಾಗೃಹದಲ್ಲಿ ಮುರುಘಾ ಶರಣರಿಂದ ಖೈದಿಗಳಿಗೆ ಮನವರ್ತನಾ ಕಾರ್ಯಾಗಾರ, ಸಂಜೆ 6.30ಕ್ಕೆ ಹೊಸಮಠ ಕಾಲೇಜು ಆವರಣದಲ್ಲಿ ಡಾ.ಶಿಮುಶಶ್ರೀ ಪ್ರಶಸ್ತಿ ಪ್ರದಾನ ಹಾಗೂ ಸಮಕಾಲೀನ ಸಮಾವೇಶ ನಡೆಯಲಿದೆ.ಕಾರ್ಯಕ್ರಮದಲ್ಲಿ ಹೊಸಳ್ಳಿ ಅಭಿನವ ಬೂದೀಶ್ವರ ಶ್ರೀಗಳು, ಹುಕ್ಕೇರಿಮಠದ ಸದಾಶಿವ ಶ್ರೀಗಳು, ಬಾಗಲಕೋಟದ ಸಿದ್ಧರಾಮೇಶ್ವರ ಶ್ರೀಗಳು ಸಮ್ಮುಖ ವಹಿಸಲಿದ್ದಾರೆ.ಅನಂತಕುಮಾರ ಹೆಗಡೆ, ಅಶೋಕ ಖೇಣಿ, ಬಸವರಾಜ ಹೊರಟ್ಟಿ, ರಮ್ಯಾ ವಸಿಷ್ಟ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಬಸವರಾಜ ಅರಬಗೊಂಡ, ಕಾರ್ಯಾಧ್ಯಕ್ಷ ರಾಜೇಂದ್ರ ಸಜ್ಜನರ, ಸ್ವಾಗತಿ ಸಮಿತಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ, ನಗರಸಭೆ ಸದಸ್ಯ ನಾಗೇಂದ್ರ ಕಟಕೋಳ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry