ಶುಕ್ರವಾರ, ಏಪ್ರಿಲ್ 23, 2021
24 °C

ಶರಣ ಸಾಹಿತ್ಯದಿಂದ ಸಮಾಜ ಪರಿವರ್ತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಂಪ್ಲಿ: ಶರಣ ಸಾಹಿತ್ಯ ಸಾಮಾಜಿಕ ಕ್ರಾಂತಿ ಮತ್ತು ಪರಿವರ್ತನೆಗೆ ಕಾರಣವಾಗಿದೆ ಎಂದು ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಇತಿಹಾಸ ಉಪನ್ಯಾಸಕ ಇಂದ್ರಿಪಿ ಮಲ್ಲಿಕಾರ್ಜುನ ಅಭಿಪ್ರಾಯಪಟ್ಟರು.ಓದ್ಸೋ ಶಿವಾನಂದಶ್ರಮದಲ್ಲಿ ಗೊಗ್ಗ ಚನ್ನಬಸಯ್ಯನವರ ಪುಣ್ಯಸ್ಮರಣೆ ಅಂಗವಾಗಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ವಚನ ಸ್ಪರ್ಧೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಧರ್ಮದ ಸಂಕುಚಿತ ಮನೋಭಾವ ಸಲ್ಲ ಎಂದರು.

 

ಹೊಸಪೇಟೆ ವಿಜಯನಗರ ಕಾಲೇಜು ಉಪನ್ಯಾಸಕ ಡಾ. ಮೃತ್ಯುಂಜಯ ರುಮಾಲೆ ಮಾತನಾಡಿ, ಪಟ್ಟಣದಲ್ಲಿ ಧಾರ್ಮಿಕ, ಆಧ್ಯಾತ್ಮಿಕ, ಪುರಾಣ ಪ್ರವಚನ, ಧರ್ಮ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಓದ್ಸೋ ಶಿವಾನಂದಶ್ರಮ ಸೇವೆ ಶ್ಲಾಘನೀಯ ಎಂದರು.ಬೆಳಗಾವಿ ವಸ್ತ್ರದ ವಿಶ್ವನಾಥ, ಶಿವಾನಂದಶ್ರಮದ ಗೊಗ್ಗ ಚನ್ನಬಸವರಾಜ, ಮುಕ್ಕುಂದಿ ಬಸವರಾಜ, ಗೊಗ್ಗ ಕಾರ್ತಿಕ್, ಶ್ರೀದೇವಿ, ಮುಕ್ಕುಂದಿ ರುದ್ರಾಣಿ, ಓದ್ಸೋ ಸಿದ್ರಾಮಯ್ಯ, ಬೂದುಗುಂಪಿ ಹುಸೇನ್‌ಸಾಬ್, ಡಾ. ಗುರುರಾಜ ಉಮಚಗಿ, ವಿ.ಆರ್. ಮುರಳೀಧರ, ಕವಿತಾಳ ಬಸವರಾಜ, ಜಿ. ಪ್ರಕಾಶ್ ಇತರರು ಹಾಜರಿದ್ದರು.

 

ಗೊಗ್ಗ ಚನ್ನಬಸಯ್ಯನವರ ಪುಣ್ಯ ಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸ್ಪರ್ಧೆಯಲ್ಲಿ ಅಮೂಲ್ಯ, ಜಿ. ಅಖಿಲ, ಪ್ರತಿಭಾ ಪ್ರಹ್ಲಾದ, ಜಿ. ಅನುಷಾ ಪ್ರಥಮ ಬಹುಮಾನ, ಕೆ. ಚೈತ್ರಾ, ನಿಸರ್ಗ ಉಮಚಗಿ, ಜ.ಎಂ. ಚೇತನ, ಮುಕ್ಕುಂದಿ ಕಿರಣ್ ದ್ವಿತೀಯ ಬಹುಮಾನ ಗಳಿಸಿದರು. ಓದ್ಸೋ ಜಡೆಮ್ಮ ಗುರುಸಿದ್ಧಯ್ಯ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ನಗದು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.