ಶರಾವತಿ ಕಣಿವೆಯಲ್ಲಿ ಹೆಚ್ಚಿದ ಮಳೆ

7

ಶರಾವತಿ ಕಣಿವೆಯಲ್ಲಿ ಹೆಚ್ಚಿದ ಮಳೆ

Published:
Updated:

ಕಾರ್ಗಲ್: ಕಳೆದ ಕೆಲವು ದಿನಗಳಿಂದ ಶರಾವತಿ ಕಣಿವೆಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಶರಾವತಿ ನದಿ ಉಕ್ಕಿ ಹರಿಯುತ್ತಿರುವ ದೃಶ್ಯ ಶುಕ್ರವಾರ ಕಂಡುಬಂದಿತು.ಇಲ್ಲಿನ ಚೈನಾಗೇಟಿನ ಬಳಿ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಮಿನಿ ಅಣೆಕಟ್ಟೆಯಲ್ಲಿ ನೀರು ತುಂಬಿ ಕೆರೆ ಕೋಡಿ ಉಕ್ಕಿ ಹರಿಯುವ ಮಾದರಿಯಲ್ಲಿ ನೀರು ರಭಸವಾಗಿ ಹರಿದು ಜೋಗ ಜಲಪಾತದೆಡೆಗೆ ಸಾಗುತ್ತಿರುವ ದೃಶ್ಯ ಪ್ರವಾಸಿಗರು ಆಶ್ಚರ್ಯ ಭರಿತರಾಗಿ ನೋಡುವಂತೆ ಕಾಣುತ್ತಿತ್ತು. ಹೆಚ್ಚಿದ ನೀರು ಜಲಪಾತದಲ್ಲಿ ಧುಮ್ಮಿಕ್ಕುತ್ತಿರುವ ಕಾರಣ ವಿಶ್ವವಿಖ್ಯಾತ ಜೋಗ ಜಲಪಾತದ ಸೌಂದರ್ಯ ಇಮ್ಮಡಿಯಾಗಿದೆ.ಮಳೆಯ ಪ್ರಮಾಣ ಹೆಚ್ಚಾಗಿದ್ದು, ಲಿಂಗನಮಕ್ಕಿ ಜಲಾಶಯಕ್ಕೆ 20 ಸಾವಿರ ಕ್ಯೂಸೆಕ್ ನೀರು ಒಳಹರಿವಿನ ಮೂಲಕ ಹರಿದುಬರುತ್ತಿರುವ ಕಾರಣ ವಿದ್ಯುತ್‌ ಬಳಕೆಗೆ ಬೇಕಾಗಿರುವ ನೀರನ್ನು ಬಳಸಿಕೊಂಡು ಹೆಚ್ಚುವರಿ 15 ಸಾವಿರ ಕ್ಯೂಸೆಕ್ ನೀರನ್ನು ಜಲಾಶಯದ ಕ್ರೆಸ್ಟ್ ಗೇಟಿನ ಮೂಲಕ ಶರಾವತಿ ನದಿಗೆ ಹರಿಸಲಾಗುತ್ತಿದೆ ಎಂದು ಕೆಪಿಸಿ ಮುಖ್ಯ ಎಂಜಿನಿಯರ್ ರಾಜಮುಡಿ ತಿಳಿಸಿದರು. ಹಿನ್ನೀರು ಪ್ರದೇಶದಲ್ಲಿ ಹೆಚ್ಚು ಮಳೆಯಾಗುತ್ತಿರುವ ಮಾಹಿತಿ ದೊರೆತಿರುವ ಕಾರಣ ಗರಿಷ್ಠ ಮಟ್ಟ ತುಂಬಿರುವ ಲಿಂಗನಮಕ್ಕಿ ಅಣೆಕಟ್ಟೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿ ತಜ್ಞರ ಸಮಾಲೋಚನೆ ಯೊಂದಿಗೆ ನೀರು ಹೊರ ಹಾಯಿಸ ಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry