ಸೋಮವಾರ, ಜನವರಿ 20, 2020
17 °C
ಭಾನುವಾರ, 15–12–1963

ಶರಾವತಿ ಬಗ್ಗೆ ನ್ಯಾಯಾಂಗ ವಿಚಾರಣೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು, ಡಿ. 14 – ಶರಾವತಿ ಯೋಜನೆ ಕಾರ್ಯಗಳಿಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನೊಳಗೊಂಡ ಒಂದು ಶ್ವೇತಪತ್ರವನ್ನು ಪ್ರಕಟಿಸಲು ಸರ್ಕಾರ ನಿರ್ಧರಿಸಿದೆಯೆಂದು ಮುಖ್ಯಮಂತ್ರಿ ಶ್ರೀ ಎಸ್‌. ನಿಜಲಿಂಗಪ್ಪನವರು ಇಂದು ವಿಧಾನ ಸಭೆಯಲ್ಲಿ ತಿಳಿಸಿದರು.ಪ್ರಶ್ನೋತ್ತರ ಕಾಲದ ನಂತರ ವಿರೋಧ ಪಕ್ಷದ ನಾಯಕ ಎಸ್‌. ಶಿವಪ್ಪ ಹಾಗೂ ಎಸ್‌. ಎಂ. ಕೃಷ್ಣ ಅವರು ಎತ್ತಿದ ‘ಶರಾವತಿ ಹಗರಣ’ ವಿಚಾರದಲ್ಲಿ ವಿವರಣೆ ನೀಡಿದ ಮುಖ್ಯಮಂತ್ರಿಯವರು ‘ಈ ಬಗ್ಗೆ ನ್ಯಾಯಾಂಗ ವಿಚಾರಣೆ ನಡೆಸಬೇಕಾದ ಅಗತ್ಯ ಏನೇನೂ ಇಲ್ಲವೆಂಬುದು ನನಗೆ ಸ್ಪಷ್ಟವಾಗಿದೆ’ ಎಂದರು.‘ಶರಾವತಿಯ ಬಗ್ಗೆ ಈ ಸಭೆಯಲ್ಲಿ ಮತ್ತು ಹೊರಗೆ ಕೇಳಿಬಂದಿರುವ ಆರೋಪಗಳು ಕೇವಲ ಊಹಾಪೋಹಗಳು, ಇವುಗಳಲ್ಲೇನೂ ಸತ್ಯಾಂಶವಿಲ್ಲ’ ಎಂದೂ ಶ್ರೀ ನಿಜಲಿಂಗಪ್ಪನವರು ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)