ಶರ್ಮದಾಗೆ ನಿರಾಸೆ

ಸೋಮವಾರ, ಜೂಲೈ 22, 2019
27 °C

ಶರ್ಮದಾಗೆ ನಿರಾಸೆ

Published:
Updated:

ನವದೆಹಲಿ: ಕರ್ನಾಟಕದ ಶರ್ಮದಾ ಬಾಲು ಇಲ್ಲಿ ನಡೆಯುತ್ತಿರುವ ಐಟಿಎಫ್ ಮಹಿಳಾ ಟೆನಿಸ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋಲು ಅನುಭವಿಸಿದರು.ಗುರುವಾರ ನಡೆದ ಪಂದ್ಯದಲ್ಲಿ ಶರ್ಮದಾ 2-6, 6-3, 4-6 ರಲ್ಲಿ ದೆಹಲಿಯ ರಿಷಿಕಾ ಸುಂಕಾರ ಎದುರು ಪರಾಭವಗೊಂಡರು.ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದ ನಿರ್ಣಾಯಕ ಸೆಟ್‌ನಲ್ಲಿ ಶರ್ಮದಾ 4-2 ರಲ್ಲಿ ಮುನ್ನಡೆ ಸಾಧಿಸಿದ್ದರು. ಆ ಬಳಿಕ ಪಂದ್ಯದ ಮೇಲಿನ ಹಿಡಿತ ಕಳೆದುಕೊಂಡು ಸೋಲು ಕಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry