ಬುಧವಾರ, ಫೆಬ್ರವರಿ 24, 2021
23 °C

ಶರ್ಯತ್ತು: ಅರುಣ ಪಾಟೀಲ ಎತ್ತಿನ ಗಾಡಿ ಪ್ರಥಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶರ್ಯತ್ತು: ಅರುಣ ಪಾಟೀಲ ಎತ್ತಿನ ಗಾಡಿ ಪ್ರಥಮ

ನಿಪ್ಪಾಣಿ: ಮಹಾಶಿವರಾತ್ರಿ ನಿಮಿತ್ತ ಇಲ್ಲಿನ ಮಹಾದೇವ ಗಲ್ಲಿಯ ಮಹಾ ದೇವ ದೇವಸ್ಥಾನ ಸಮಿತಿಯಿಂದ ಮಂಗಳವಾರ ಏರ್ಪಡಿಸಿದ್ದ ಜನರಲ್‌ ಜೋಡೆತ್ತಿನ ಗಾಡಿ ಶರ್ಯತ್ತಿನಲ್ಲಿ ಕೊಲ್ಲಾಪುರ ಜಿಲ್ಲೆಯ ಇಚಲಕರಂಜಿಯ ಅರುಣ ಪಾಟೀಲ ಅವರ ಗಾಡಿ ಪ್ರಥಮ ಸ್ಥಾನ ಪಡೆದು ₨ 25 ಸಾವಿರ ಬಹುಮಾನ ಪಡೆಯಿತು.ಕಾಗಲ್‌ ತಾಲ್ಲೂಕಿನ ಬಾನಗೆಯ ರವಿಂದ್ರ ಪಾಟೀಲರ ಗಾಡಿ ದ್ವಿತೀಯ ಸ್ಥಾನ ಪಡೆದು ₨15 ಸಾವಿರ ಹಾಗೂ ಕೋಲೆಯ ಪಂಕಜ ಗುರವ ಅವರ ಗಾಡಿಯು ತೃತೀಯ ಸ್ಥಾನ ಪಡೆದು ₨ 10 ಸಾವಿರ ಬಹುಮಾನ ಪಡೆದವು.ಒಂದು ಕುದುರೆ ಒಂದು ಎತ್ತಿನ ಗಾಡಿ ಶರ್ಯತ್ತಿನಲ್ಲಿ ಮಲ್ಲಿಕವಾಡದ ಪೃಥ್ವಿ ರಾಜ ಕೆರೂರೆ ಅವರ ಗಾಡಿ ಪ್ರಥಮ ಸ್ಥಾನ ಪಡೆದು ₨11 ಸಾವಿರ, ದಾನೋಳಿಯ ಬಂಡಾ ಖಿಲಾರೆ ಇವರ ಗಾಡಿ ದ್ವಿತೀಯ ಸ್ಥಾನ ಪಡೆದು ₨ 7 ಸಾವಿರ ಹಾಗೂ ಬೋರಗಾವನ ಪೋಪಟ ಸೋಮಾನೆ ಇವರ ಗಾಡಿ ತೃತೀಯ ಸ್ಥಾನ ಪಡೆದು ₨5 ಸಾವಿರ ಗಳಿಸಿದವು.ಕುದುರೆ ಗಾಡಿ ಶರ್ಯತ್ತಿನಲ್ಲಿ ನಗರದ ಮಹೇಶ ಪಾಟೀಲರ ಗಾಡಿ ಪ್ರಥಮ, ಕುರ್ಲಿಯ ಹರಿದಾಸ ದಿವಟೆ ಅವರ ಗಾಡಿ ದ್ವಿತೀಯ ಮತ್ತು ಜತ್ರಾಟನ ಶಂಕರ ಜಗದಾಳೆಯವರ ಗಾಡಿ ತೃತೀಯ ಸ್ಥಾನ ಪಡೆದು ಬಹುಮಾನ ಗಿಟ್ಟಿಸಿದವು.ನಗರಸಭೆ ಸದಸ್ಯ ಸುನೀಲ ಪಾಟೀಲ, ರವಿಂದ್ರ ಚಂದ್ರಕುಡೆ, ರವಿಂದ್ರ ಕೋಠಿವಾಲೆ, ಅಣ್ಣಾಸಹೇಬ ಜಾಧವ, ಬಸವರಾಜ ದಿವಾಣ, ಸಮೀರ ಬಾಗೇವಾಡಿ, ಅಮೋಲ ಚಂದ್ರಕುಡೆ, ಮಹೇಶ ಬಾಗೇವಾಡಿ ಅವರು ಬಹುಮಾನಗಳ ವಿತರಣೆ ವಿತರಿಸಿದರು.

ಪಿ.ಜೆ. ನರಕೆ ಮತ್ತು ಎನ್‌.ಎಸ್‌. ಮಾದನ್ನವರ  ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.