ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ

7

ಶಸ್ತ್ರಚಿಕಿತ್ಸಾ ಘಟಕ ಉದ್ಘಾಟನೆ

Published:
Updated:

ಬೆಂಗಳೂರು: ದಿ ಸ್ಟೇಟ್‌ ಆಫ್‌ ಆರ್ಟ್‌ ಸೂಪರ್ ಸ್ಪೆಷಾಲಿಟಿ ಸಕಾರ್‌ ಆಸ್ಪತ್ರೆ­ಯಲ್ಲಿನ  ಸಂಯೋಜಿತ ಶಸ್ತ್ರಚಿಕಿತ್ಸಾ ಘಟಕ­ಗಳನ್ನು ಬಯೋಕಾನ್‌ ವ್ಯವ­ಸ್ಥಾಪಕ ನಿರ್ದೇಶಕಿ ಕಿರಣ್‌ ಮಜುಂದಾರ್ ಉದ್ಘಾಟಿಸಿದರು.ಕಿರ್ಲೋಸ್ಕರ್, ಟೊಯೊಟಾ, ಸೀಕಾಮ್ ಆಸ್ಪತ್ರೆ  ಸೇರಿದಂತೆ  ಹಲವು ಸಮೂಹ ಸಂಸ್ಥೆಗಳ ಪಾಲುದಾರಿಕೆ­ಯಲ್ಲಿ ಸಕಾರ್ ಆಸ್ಪತ್ರೆ ಸೇವೆ ಸಲ್ಲಿಸುತ್ತಿದೆ. ಉದ್ಘಾಟನೆಯ ನಂತರ ಮಾತನಾಡಿದ ಕಿರಣ್‌ ಮಜುಂದಾರ್,  ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಉತ್ಕಷ್ಟ ಗುಣಮಟ್ಟದ ಆರೋಗ್ಯ ಸೇವೆ ಒದಗಿ­ಸುವಲ್ಲಿ ಸಕಾರ್ ಹೊಸ ಯೋಜನೆ­ಗಳನ್ನು ರೂಪಿಸಿಕೊಂಡಿದೆ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಾದ್ಯಂತ ಇತರೆ ಶಾಖೆಗಳನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ ಎಂದ ಅವರು,  ಜಪಾನ್‌ನಲ್ಲಿ ತರಬೇತಿ ಪಡೆದಿರುವ ನುರಿತ ಶುಶ್ರೂಷಕರಿದ್ದು, ಉತ್ತಮ ಸೇವೆ ಇದೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry