ಬುಧವಾರ, ಜೂನ್ 23, 2021
21 °C

ಶಸ್ತ್ರಾಸ್ತ್ರ ಒಪ್ಪಿಸುವ ಆದೇಶ ಪ್ರಶ್ನಿಸಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಬಂದೂಕುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು

ಮಡಿ­ಕೇರಿ­ ಜಿಲ್ಲಾಧಿಕಾರಿ ಹೊರಡಿ­ಸಿ­ರುವ ಆದೇಶ ಪ್ರಶ್ನಿಸಿ ಕೊಡಗಿನ ಕೆ.­ಆರ್‌.­ ಸುರೇಶ್‌ ಹೈ­­ಕೋರ್ಟ್‌ಗೆ ಅರ್ಜಿ ಸಲ್ಲಿಸಿ­ದ್ದಾರೆ.­‘ನಾನು ಶಸ್ತ್ರಾಸ್ತ್ರ ಕಾಯ್ದೆಯ ಅಡಿ ಪರವಾನಗಿ ಹೊಂದಿರುವ ಬಂದೂಕು ಇಟ್ಟುಕೊಂಡಿದ್ದೇನೆ. ಕಾಫಿ ತೋಟಗಳ ರಕ್ಷಣೆಗೆ, ಆತ್ಮ­ರಕ್ಷಣೆಗೆ ಇದು ನನಗೆ ಬೇಕು. ನಾನು ಕಾನೂನು ಉಲ್ಲಂಘಿಸುವ ವ್ಯಕ್ತಿ ಅಲ್ಲ. ಬಂದೂಕನ್ನು ಚುನಾ­ವಣೆ ಸಂದರ್ಭದಲ್ಲಿ ಪೊಲೀಸರ ವಶಕ್ಕೆ ಒಪ್ಪಿಸಿದರೆ ಜೀವ ರಕ್ಷಣೆಗೆ, ಆಸ್ತಿ ರಕ್ಷಣೆಗೆ ಏನು ಮಾಡ­ಬೇಕು?’ ಎಂದು ಅವರು ಅರ್ಜಿ­ಯಲ್ಲಿ ಪ್ರಶ್ನಿಸಿದ್ದಾರೆ.ಇದರ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌. ಅಬ್ದುಲ್‌ ನಜೀರ್‌ ನಡೆಸುತ್ತಿದ್ದಾರೆ. ನ್ಯಾಯಮೂರ್ತಿಗಳು ಜಿಲ್ಲಾಧಿಕಾರಿಗೆ ನೋಟಿಸ್‌ ಜಾರಿಗೆ ಬುಧವಾರ ಆದೇಶಿಸಿದ್ದಾರೆ. ಗುರುವಾರ ಮತ್ತೆ ವಿಚಾರಣೆಗೆ ಬರಲಿದೆ. ‘ಎಲ್ಲರೂ ತಮ್ಮ ಬಂದೂಕು/ ಪಿಸ್ತೂಲುಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಬೇಕು ಎಂದು ಆದೇಶಿಸುವುದು ಸರಿಯಲ್ಲ’ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.