ಶಸ್ತ್ರಾಸ್ತ್ರ ನೆರವಿನ ಬಳಕೆ

7

ಶಸ್ತ್ರಾಸ್ತ್ರ ನೆರವಿನ ಬಳಕೆ

Published:
Updated:

ನವದೆಹಲಿ, ಡಿ. 2-ಭಾರತದ ಶಾಂತಿಪ್ರಿಯವಾದ ಹಾಗೂ ಎಲ್ಲ ರಾಷ್ಟ್ರಗಳೊಡನೆ ಸ್ನೇಹದಿಂದಿರುವ ನೀತಿಯನ್ನು “ಪಾಕಿಸ್ತಾನದೊಡನೆಯ ನಮ್ಮ ಸಂಬಂಧಗಳಲ್ಲಿ ಹೆಚ್ಚು ವಿಶೇಷವಾಗಿ ಅನ್ವಯಿಸಲಾಗುವುದೆಂದು” ಪ್ರಧಾನಮಂತ್ರಿ ನೆಹರೂರವರು ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್‌ರಿಗೆ ಭರವಸೆ ನೀಡಿದ್ದಾರೆ.

ನ. 12 ರಂದು ಅಯೂಬ್‌ಖಾನರಿಗೆ ಬರೆದ ಪತ್ರವೊಂದರಲ್ಲಿ “ಪಾಕಿಸ್ತಾನದೊಡನೆ ಘರ್ಷಣೆ ನಡೆಯುವ ವಿಚಾರವು ನಮಗೆ ಹಿಡಿಸದ ವಿಷಯ” ಎಂದಿದ್ದಾರೆ.

ಸೇನಾ ವಾಪಸಾತಿಗೆ ಸೂಚನೆ

ತೇಜಪುರ, ಡಿ. 2- ಬೊಮ್ಡಿಲಾದಿಂದ ಕೆಲವು ವಾಹನಗಳು ಹೊರಕ್ಕೆ ಹೋಗುತ್ತಿರುವುದಷ್ಟೇ ಚೀಣಿ ಸೈನ್ಯದ ವಾಪಸಾತಿಯು ನಡೆದಿರಬಹುದಾದುದರ ಏಕೈಕ ಸೂಚನೆಯೆಂದು ಇಲ್ಲಿನ ಅಧಿಕಾರಯುತ ಮಿಲಿಟರಿ ಮೂಲಗಳು ತಿಳಿಸಿವೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry