ಶಹಾಬಾದ:ಕಲ್ಲು ನಾಡಿಗೆ ಮಂಜಿನ ಮುಸುಕು !

7

ಶಹಾಬಾದ:ಕಲ್ಲು ನಾಡಿಗೆ ಮಂಜಿನ ಮುಸುಕು !

Published:
Updated:

ಶಹಾಬಾದ:ಕಲ್ಲುಗಳ ಖ್ಯಾತಿಯ ಕೈಗಾ ರಿಕಾ ಪಟ್ಟಣ ಶಹಾಬಾದನಲ್ಲಿ ಸೋಮವಾರ ಬೆಳಗಿನ ಜಾವ `ಮಂಜಿನ ಮುಸುಕು~ ಸೃಷ್ಟಿಯಾಗಿ ಜನರನ್ನು ಕೆಲಕಾಲ ಭಾವಜೀವಿಗಳನ್ನಾಗಿಸಿತ್ತು. ಪಟ್ಟಣದ ಯಾವುದೇ ದಿಕ್ಕಿಗೆ ನೋಡಿದರು, ಮಂಜು ಮುಸುಕಿದ ವಾತಾವರಣ ಸುಮಾರು ಮೂರು ಗಂಟೆಗಳ ಕಾಲ ವಿಜೃಂಭಿಸಿ ಜನರ ಅಚ್ಚರಿಗೆ ಕಾರಣವಾಯಿತು,ಬೆಳಗಿನ ಈ ವಿಸ್ಮಯ ಕುರಿತು `ಪ್ರಜಾವಾಣಿ~ ಪ್ರತಿನಿಧಿಗೆ ಮೇಲಿಂದ ಮೇಲೆ ದೂರವಾಣಿಗಳು ಬರಲಾರಂಭಿಸಿದವು. ಛಾಯಾಗ್ರಾಹಕ ವಾಸುದೇವ ಚವ್ಹಾಣ ಈ ದೃಶ್ಯಗಳನ್ನು ಸೆರೆಹಿಡಿದರು. ಊಟಿ, ಕೊಡೈಕೆನಲ್ ಮತ್ತಿತರ ತಂಪುದಾಣಗಳ ಅನುಭವವನ್ನು ತಮ್ಮೂರಿನಲ್ಲೇ ಸವಿದ ಶಹಾಬಾದಿನ ಜನಕ್ಕೆ ಇಂತಹ ವಾತಾವರಣ ತೀರ ಅಪರೂಪ. ಕೆಲ ವರ್ಷಗಳ ಹಿಂದೆ ಇಂತಹುದೆ `ಮಂಜಿನ ಕಾವ್ಯ~ ಸೃಷ್ಟಿಯಾಗಿದ್ದನ್ನು ಕೆಲ ಹಿರಿಯರು ನೆನಪಿಸಿಕೊಂಡರು.ತೋಟಗಾರಿಕಾ ಪರಿಣತ ಆರ್.ಎ. ಮಹೇಂದ್ರಕರ್ `ವಾತಾವರಣದಲ್ಲಿ ಒಮ್ಮಿಂದೊಮ್ಮಿಲೆ ಶಾಖ ಕಡಿಮೆಯಾದಾಗ, ಮಳೆಗಾಲದಲ್ಲಿ ಕೆಲವೊಮ್ಮೆ ವಾತಾವರಣದಲ್ಲಿನ ನೀರಿನ ಸೂಕ್ಷ್ಮಕಣಗಳು ಕಲೆತು `ಮಂಜನ್ನು~ ಸೃಷ್ಟಿಸುತ್ತವೆ~ ಎನ್ನುತ್ತಾರೆ.ಭಂಕೂರ, ಹೊನಗುಂಟಿ, ಗೋಳಾ(ಕೆ), ಮಾಲಗತ್ತಿ ಹಾಗೂ ತೊನಸನಹಳ್ಳಿ ಗ್ರಾಮಗಳಲ್ಲೂ ಇಂತಹ ಅಪರೂಪದ ವಾತಾವರಣದ ದೃಶ್ಯ ವೈಭವವನ್ನು ಜನ ಅನುಭವಿಸಿದರು.ಆಳಂದ: ಸಭೆಗೆ ಗೈರು- 20ಅಧಿಕಾರಿಗಳಿಗೆ ನೋಟಿಸ್

ಆಳಂದ : 
ಇಲ್ಲಿಯ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಕರೆದಿದ್ದ ಕೆಡಿಪಿ ಸಭೆಗೆ, ಸತತವಾಗಿ ಗೈರು ಹಾಜರಾದ ವಿವಿಧ ಇಲಾಖೆಯ 20 ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ನೀಡಲು ಮತ್ತು ಅವರ ವಿರುದ್ಧ ಕ್ರಮಕೈಗೊಳ್ಳಲು ಸದಸ್ಯರು ಒತ್ತಾಯಿಸಿದ ಘಟನೆ ನಡೆದಿದೆ.ಶಾಸಕರ ಅನುಪಸ್ಥಿತಿಯಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಾಯಮ್ಮಗೌಡ ಪಾಟೀಲ್ ನೇತೃತ್ವದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಗೆ 32 ಇಲಾಖೆಗಳ ಪೈಕಿ, ಕೇವಲ 10 ಇಲಾಖೆಯ ಅಧಿಕಾರಿಗಳು ಹಾಜರಾಗಿರುವುದರಿಂದ ತೀವ್ರ ಆಕ್ರೋಶಗೊಂಡ ಸದಸ್ಯರು ಬಿಸಿ ಚರ್ಚೆ ನಡೆಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry