ಶುಕ್ರವಾರ, ಏಪ್ರಿಲ್ 16, 2021
20 °C

ಶಹಾಬಾದ: ಶಿಲುಬೆ ಅಡಿಯಲ್ಲಿ ಹಾರಿದ ತ್ರಿವರ್ಣ ಧ್ವಜ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಹಾಬಾದ: ಇಲ್ಲಿನ ಲಕ್ಷ್ಮೀ ಗಂಜ್ ಪ್ರದೇಶದಲ್ಲಿನ ಸೇಂಟ್ ಥಾಮಸ್ ಚರ್ಚ್‌ನ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರೋತ್ಸವ ದಿನದಂದು ರಾಷ್ಟ್ರಧ್ವಜವನ್ನು ಶಿಲುಬೆಯ ಅಡಿಯಲ್ಲಿ ಹಾರಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ವಿವಿಧ ಸಂಘಟನೆಗಳು ಘಟನೆಯನ್ನು ಖಂಡಿಸಿವೆ.ಶಾಲೆಯ ಧ್ವಜದ ಕಂಬದ ಮೇಲೆ ಶಿಲುಬೆ ಆಕಾರದ ಚಿಹ್ನೆ ಕೂಡಿಸಲಾಗಿದೆ. ರಾಷ್ಟ್ರಧ್ವಜ ಇದರ ಕೆಳಗೆ ಹಾರಿಸಲಾಗಿರುವುದನ್ನು ಸಂಜೆ ಕೆಲ ಸ್ಥಳೀಯರು ಗಮನಿಸಿ ನಂತರ ವಿವಿಧ ಸಂಘಟನೆಗಳ ಮುಖಂಡರ ಗಮನಕ್ಕೆ ತಂದಿದ್ದಾರೆ.ತಕ್ಷಣವೆ ಸ್ಥಳಕ್ಕೆ ಬಿಜೆಪಿ ನಗರಾಧ್ಯಕ್ಷ ಡಾ.ಅಶೋಕ ಜಿಂಗಾಡೆ, ಜಿಲ್ಲಾ ಮುಖಂಡ ಶಾಂತರೆಡ್ಡಿ ದಂಡಗೋಳಕರ್, ಭಜರಂಗ ದಳದ ದಶರಥ ದೇಸಾಯಿ, ವಿಶ್ವ ಹಿಂದು ಪರಿಷತ್ತಿನ ರಾಮು ಕುಸಾಳೆ, ಗಣೇಶ ಓಜಾ ಹಾಗೂ ಸಂತೋಷ ಪುಲಸೆ ಭೇಟಿ ನೀಡಿ, ಶಾಲಾ ಆಡಳಿತ ವನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಮೌಖಿಕ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಮಧ್ಯೆ ಘಟನೆ ಬಗ್ಗೆ ವಿವಿಧ ಸಂಘಟನೆಗಳು ತಾಲ್ಲೂಕು ಶಿಕ್ಷಣಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಆದರೆ ಪ್ರಕರಣದ ಬಗ್ಗೆ ನಿರಾಸಕ್ತಿ ತೋರಿಸಿರುವ ಅಧಿಕಾರಿ `ಇದರಲ್ಲಿ ತಮ್ಮ ಪಾತ್ರವೇನೂ ಇಲ್ಲ~ ಎಂದು ಜಾರಿಕೊಂಡಿರುವುದಾಗಿ ಬಿಜೆಪಿ ಮುಖಂಡರು ~ಪ್ರಜಾವಾಣಿ~ಗೆ ತಿಳಿಸಿದ್ದಾರೆ.ಆದರೆ ಗುರುವಾರದ ಬೆಳವಣಿಗೆಯಲ್ಲಿ ಶಹಾಬಾದ ನಗರ ಠಾಣೆಗೆ ಆಗಮಿಸಿದ ಚರ್ಚ್‌ನ ಮುಖ್ಯಸ್ಥರು ಹಾಗೂ ಶಾಲಾ ಸಿಬ್ಬಂದಿ, ಕಳೆದ ನಾಲ್ಕಾರು ವರ್ಷದಿಂದ ತಾವು ಇದೆ ರೀತಿಯಲ್ಲಿ ಧ್ವಜಾರೋಹಣ ಮಾಡುತ್ತಿರುವುದಾಗಿಯೂ, ಅಚಾತುರ್ಯದ ಬಗ್ಗೆ ವಿಷಾದ ವ್ಯಕ್ತಪಡಿಸಿ, ಮುಂದೆ ಹೀಗಾಗದಂತೆ ಎಚ್ಚರಿಕೆವಹಿಸುವ ಬಗ್ಗೆ ಭರವಸೆ ನೀಡಿದ್ದರಿಂದ ವಾತಾವರಣ ತಿಳಿಗೊಂಡಿದೆ.   

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.