ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ:ಕ್ವಾರ್ಟರ್ ಫೈನಲ್‌ಗೆ ಭೂಪತಿ- ರೋಹನ್

7

ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿ:ಕ್ವಾರ್ಟರ್ ಫೈನಲ್‌ಗೆ ಭೂಪತಿ- ರೋಹನ್

Published:
Updated:

ಶಾಂಘೈ (ಪಿಟಿಐ): ಮಹೇಶ್ ಭೂಪತಿ ಮತ್ತು ರೋಹನ್ ಬೋಪಣ್ಣ ಜೋಡಿ ಇಲ್ಲಿ ನಡೆಯುತ್ತಿರುವ ಶಾಂಘೈ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಜೋಡಿ 7-6, 6-4 ರಲ್ಲಿ ಅಮೆರಿಕದ ಟ್ರೀಟ್ ಹ್ಯೂ ಮತ್ತು ಇಂಗ್ಲೆಂಡ್‌ನ ಜೊನಾಥನ್ ಮರ‌್ರೆ ವಿರುದ್ಧ ಜಯ ಪಡೆಯಿತು.ಇಲ್ಲಿ ಏಳನೇ ಶ್ರೆಯಾಂಕ ಹೊಂದಿರುವ ಭೂಪತಿ ಹಾಗೂ ರೋಹನ್ ಎಂಟರಘಟ್ಟದ ಪಂದ್ಯದಲ್ಲಿ ಮ್ಯಾಕ್ಸ್ ಮಿರ್ನಿ ಮತ್ತು ಡೇನಿಯಲ್ ನೆಸ್ಟರ್ ಅವರ ಸವಾಲನ್ನು ಎದುರಿಸುವರು.ಎರಡನೇ ಶ್ರೇಯಾಂಕ ಹೊಂದಿರುವ ಮಿರ್ನಿ ಮತ್ತು ನೆಸ್ಟರ್ ದಿನದ ಮತ್ತೊಂದು ಪಂದ್ಯದಲ್ಲಿ 6-2, 7-6 ರಲ್ಲಿ ಥಾಮಸ್ ಬೆರ್ಡಿಚ್ ಹಾಗೂ ನೆನಾದ್ ಜಿಮೋಂಜಿಕ್ ವಿರುದ್ಧ ಜಯ ಪಡೆದರು.ಪೇಸ್- ಸ್ಟೆಪನೆಕ್‌ಗೆ ಗೆಲುವು: ಲಿಯಾಂಡರ್ ಪೇಸ್ ಮತ್ತು ರಾಡೆಕ್ ಸ್ಟೆಪನೆಕ್ ಕೂಡಾ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಎರಡನೇ ಸುತ್ತಿನ ಪಂದ್ಯದಲ್ಲಿ ಅವರು 6-4, 6-4 ರಲ್ಲಿ ದಕ್ಷಿಣ ಆಫ್ರಿಕದ ಕೆವಿನ್ ಆ್ಯಂಡರ್‌ಸನ್ ಹಾಗೂ ಅಮೆರಿಕದ ಸ್ಯಾಮ್ ಕ್ವೆರಿ ವಿರುದ್ಧ ಗೆಲುವು ಸಾಧಿಸಿದರು.ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಭಾರತ- ಜೆಕ್ ಗಣರಾಜ್ಯದ ಜೋಡಿ ಮುಂದಿನ ಸುತ್ತಿನಲ್ಲಿ ಆಸ್ಟ್ರಿಯದ ಜರ್ಗನ್ ಮೆಲ್ಜರ್ ಮತ್ತು ಕೆನಡದ ಮಿಲೋಸ್ ರಾವೊನಿಕ್ ವಿರುದ್ಧ ಪೈಪೋಟಿ ನಡೆಸಲಿದೆ.

ಎಂಟರಘಟ್ಟಕ್ಕೆ ಜೊಕೊವಿಚ್: ಸರ್ಬಿಯದ ನೊವಾಕ್ ಜೊಕೊವಿಚ್ ಇದೇ ಟೂರ್ನಿಯ ಸಿಂಗಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು. ಗುರುವಾರ ನಡೆದ ಪಂದ್ಯದಲ್ಲಿ ಅವರು 6-3, 6-3 ರಲ್ಲಿ ಸ್ಪೇನ್‌ನ ಫೆಲಿಸಿಯಾನೊ ಲೊಪೆಜ್ ವಿರುದ್ಧ ಗೆದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry