ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಇಂದಿನಿಂದ

7

ಶಾಂತವೀರ ಪಟ್ಟಾಧ್ಯಕ್ಷರ ಸ್ಮರಣೋತ್ಸವ ಇಂದಿನಿಂದ

Published:
Updated:

ಹಾವೇರಿ: ಸಿಂದಗಿ ಮಠದ ಶ್ರೀ ಶಾಂತವೀರ ಪಟ್ಟಾಧ್ಯಕ್ಷರ 32 ನೇ ಸ್ಮರಣೋತ್ಸವ ಫೆ. 15 ರಿಂದ ಏಳು ದಿನಗಳ ಕಾಲ ಇಲ್ಲಿನ ಸಿಂದಗಿ ಮಠದ ಆವರಣದಲ್ಲಿ ನಡೆಯಲಿದೆ.ಗದುಗಿನ ತೋಂಟದಾರ್ಯ ಮಠದ ಡಾ. ತೊಂಟದ ಸಿದ್ಧಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ಜರುಗಲಿವ ಸ್ಮರಣೋತ್ಸವ ಕಾರ್ಯಕ್ರಮವನ್ನು ಫೆ.15 ರಂದು ಸಂಜೆ 7.30 ಕ್ಕೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಉದ್ಘಾಟಿಸುವರು.ಅಥಣಿ ಮೋಟಗಿ ಮಠದ ಪ್ರಭು ಚನ್ನಬಸವ ಸ್ವಾಮಿಗಳಿಂದ `ಮಹಾತ್ಮರ ಬದುಕು ಬೆಳಕು~ ಪ್ರವಚನ ಕೂಡಾ ಅಂದೇ ಆರಂಭವಾಗಲಿದೆ. ಗೌಡಗಾಂವದ ಶಿವರುದ್ರಯ್ಯ ಕಲಬುರ್ಗಿಮಠ ಅವರಿಂದ ಸಂಗೀತ, ಧಾರವಾಡದ ಗುರುಬಸವ ಮಹಾಮನಿ ವಯೋಲಿನ್, ಗದುಗಿನ ಬಸವರಾಜ ಚಲಗೇರಿ ತಬಲಾ ಸಾಥ್ ನೀಡಲಿದ್ದಾರೆ.ಫೆ. 16 ರಂದು ಸಂಜೆ 7.30 ಕ್ಕೆ ನಡೆಯುವ ಎರಡನೇ ದಿನದ ಕಾರ್ಯಕ್ರಮದಲ್ಲಿ ಮೂಡಿ ವಿರಕ್ತಮಠದ ಸದಾಶಿವ ಶ್ರೀಗಳು ಸಾನ್ನಿಧ್ಯವಹಿಸಲಿದ್ದಾರೆ. ನಂತರ ಗೌಡಗಾಂವದ ರಾಮಲಿಂಗಯ್ಯ ಕಲಬುರ್ಗಿಮಠ ಅವರ ತತ್ವ ಪದಗಳ ಕಾರ್ಯಕ್ರಮವಿದೆ.ಫೆ. 17 ರಂದು ಸಂಜೆ 7.30 ಕ್ಕೆ ಭಾಗೋಜಿಕೊಪ್ಪ ಶಿವಯೋಗೀಶ್ವರ ಹಿರೇಮಠದ ಶಿವಲಿಂಗ ಮುರುಘೇಂದ್ರ ಶಿವಾಚಾರ್ಯ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ದೂರದರ್ಶನ ಕಲಾವಿದ ಮಲ್ಲಿಕಾರ್ಜುನ ಶಾನುಬೋಗ ಅವರಿಂದ ಸುಗಮ ಸಂಗೀತ. ಫೆ. 18 ರಂದು ಸಂಜೆ 7.30 ಕ್ಕೆ ಅಕ್ಕಿಆಲೂರು ವಿರಕ್ತ ಮಠದ ಶಿವಬಸವ ಶ್ರೀಗಳ ಸಾನ್ನಿಧ್ಯದಲ್ಲಿ ಗುಲ್ಬರ್ಗಾದ ಗುಂಡಣ್ಣ ಡಿಗ್ಗಿ ಆಧ್ಯಾತ್ಮದಲ್ಲಿ ಹಾಸ್ಯ ಎಂಬ ವಿಷಯ ಕುರಿತು ಮಾತನಾಡಲಿದ್ದಾರೆ.ಫೆ. 19 ರಂದು ಸಂಜೆ 7.30 ಕ್ಕೆ ಬೈರನಹಟ್ಟಿಯ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳ ಸಾನ್ನಿಧ್ಯದಲ್ಲಿ ದೂರದರ್ಶನ ಕಲಾವಿದ ನಾಗಲಿಂಗಯ್ಯ ವಸ್ತ್ರದ ಅವರಿಂದ ಭಕ್ತಿ ಸಂಗೀತ, ಫೆ. 20 ರಂದು  ರಾತ್ರಿ 8.30 ಕ್ಕೆ ಮಹಾಶಿವರಾತ್ರಿ ನಿಮಿತ್ಯ ಪ್ರವಚನ ಹೋತನಹಳ್ಳಿ ಸಿಂದಗಿ ಮಠದ ಶಂಭುಲಿಂಗ ಪಟ್ಟಾಧ್ಯಕ್ಷರ ಸಾನ್ನಿಧ್ಯದಲ್ಲಿ ನಡೆಯಲಿದೆ. ತಳ್ಳಿಹಳ್ಳಿಯ ಮೃತ್ಯುಂಜಯ ಹಿರೇಮಠರಿಂದ ಭಕ್ತಿ ಸಂಗೀತವಿದೆ.ಫೆ.21 ರಂದು ಬೆಳಿಗ್ಗೆ ಲಿಂ.ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಮಹಾದಾಸೋಹ ಹಾಗೂ ಸ್ಮರಣೋತ್ಸವ, ಸಂಜೆ 7.30 ಕ್ಕೆ ಗದುಗಿನ ತೋಂಟದ ಜಗದ್ಗುರು ಡಾ.ಸಿದ್ಧಲಿಂಗ ಸ್ವಾಮಿಗಳ ಸಾನ್ನಿಧ್ಯದಲ್ಲಿ ವಿಶೇಷ ಕಾರ್ಯಕ್ರಮ ಹಾಗೂ ಪ್ರವಚನ ಮಂಗಲವಿದೆ. ಗದುಗಿನ ಶರಣಕುಮಾರ ಕೊತ್ತಲಚಿಂತಾ ಅವರಿಂದ ವಚನ ಸಂಗೀತವಿದೆ.ತಮಿಳುನಾಡು ಕುಂಭಕೋಣಂನ ವೀರಶೈವ ಪೆರಿಯಮಠಂ ಅಧಿಪತಿ ಶೀಲಾ ನೀಲಕಂಠ ಸಾರಂಗ ದೇಶಿಕೇಂದ್ರ ಶ್ರೀಗಳು, ಲಿಂಗಬಸಯ್ಯ ಮಠದ, ಯೋಗ ಸಾಧಕನ ಪ್ರೇಮಕುಮಾರ ಮುದ್ದಿ ಅವರ ಸನ್ಮಾನವಿದೆ ಎಂದು ಸಿಂದಗಿಮಠದ ವ್ಯವಸ್ಥಾಪಕ ಶಿವಯೋಗಿಸ್ವಾಮಿ ಆರಾಧ್ಯಮಠ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry