ಶಾಂತಾ ಕಾಯ್ಕಿಣಿ ನಿಧನ

7

ಶಾಂತಾ ಕಾಯ್ಕಿಣಿ ನಿಧನ

Published:
Updated:

ಕುಮಟಾ: ಹೆಸರಾಂತ ಬರಹಗಾರರಾಗಿದ್ದ ಗೌರೀಶ ಕಾಯ್ಕಿಣಿ ಅವರ ಪತ್ನಿ ಹಾಗೂ ಜಯಂತ ಕಾಯ್ಕಿಣಿ ಅವರ ತಾಯಿ ಶಾಂತಾ ಕಾಯ್ಕಿಣಿ (86) ಮಂಗಳವಾರ ಬೆಳಗಿನ ಜಾವ ತಾಲ್ಲೂಕಿನ ಗೋಕರ್ಣದಲ್ಲಿ ನಿಧನರಾದರು.ತಾಯಿಯ ಆರೋಗ್ಯ ನೋಡಿಕೊಳ್ಳಲು ಏಕೈಕ ಪುತ್ರ ಜಯಂತ ಕಾಯ್ಕಿಣಿ ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ ಗೋಕರ್ಣಕ್ಕೆ ಆಗಮಿಸಿದ್ದರು. ಕೆಲ ತಿಂಗಳ ಹಿಂದಷ್ಟೇ ಗೌರೀಶ ಕಾಯ್ಕಿಣಿ ಅವರ ಜನ್ಮ ಶತಾಬ್ದಿ ವರ್ಷದ ಕಾರ್ಯಕ್ರಮಗಳು ಗೋಕರ್ಣದಲ್ಲಿನ ಅವರ ಮನೆ `ಪರ್ಣಕುಟಿ'ಯಲ್ಲಿ ನಡೆದಿದ್ದವು. ಶಾಂತಾ ಕಾಯ್ಕಿಣಿ ಅವರು ಪತಿಯ ಜನ್ಮಶತಾಬ್ದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ಅಪರೂಪದ ಸಾಹಿತಿ ಪತ್ನಿ ಎನಿಸಿಕೊಂಡಿದ್ದರು.50ರ ದಶಕದಲ್ಲಿಯೇ ಪದವಿ ಪಡೆದು, ಸಮೀಪದ ಭದ್ರಕಾಳಿ ಶಾಲೆಯಲ್ಲಿ ಶಿಕ್ಷಕಿಯಾಗಿ ಶಾಂತಾ ಕಾಯ್ಕಿಣಿ ಸೇವೆ ಸಲ್ಲಿಸಿದ್ದರು. ಗೋಕರ್ಣದಲ್ಲಿ ಮಹಿಳಾ ಸಂಘಟನೆಯಲ್ಲಿ, ಸಂಸ್ಥಾ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷರಾಗಿ ಹಾಗೂ ಜನತಾ ದಳದಲ್ಲೂ ಗುರುತಿಸಿಕೊಂಡಿದ್ದರು. ರಾಜ್ಯ ಶಿಕ್ಷಣ ಸಮಿತಿ ಸದಸ್ಯರಾಗಿಯೂ ಕೆಲಸ ಮಾಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry