ಶನಿವಾರ, ನವೆಂಬರ್ 23, 2019
17 °C

ಶಾಂತಿಕಾ ಪರಮೇಶ್ವರಿ ವರ್ಧಂತಿ ಉತ್ಸವ ಇಂದು

Published:
Updated:

ಅಂಕೋಲಾ: ತಾಲ್ಲೂಕಿನ ಮೊಗಟಾ ಗ್ರಾಮದಲ್ಲಿ ಶಾಂತಿಕಾ ಪರಮೇಶ್ವರಿ ಹಾಗೂ ಬೊಮ್ಮಯ್ಯ ದೇವರ ವರ್ಧಂತಿ ಉತ್ಸವ ಇದೇ 26ರಂದು ನಡೆಯಲಿದೆ.

ಬೆಳಿಗ್ಗೆ 9 ಗಂಟೆಯಿಂದ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಮಧ್ಯಾಹ್ನ 1 ಗಂಟೆಯ ನಂತರ ಕುಂಭಾಭಿಷೇಕ ನಡೆಯಲಿದೆ. ರಾತ್ರಿ 9.30 ಗಂಟೆಗೆ ಪೆರ್ಡೂರು ಮೇಳದವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ ಎಂದು ದೇವಸ್ಥಾನ ಆಡಳಿತ ಸಮಿತಿ ತಿಳಿಸಿದೆ.ವರ ಮಹಾಗಣಪತಿ ವರ್ಧಂತಿ ನಾಳೆಯಿಂದ: ಶೆಟಗೇರಿಯ  ವರ ಮಹಾಗಣಪತಿ ದೇವಸ್ಥಾನದಲ್ಲಿ ಇದೇ 27 ಮತ್ತು 28ರಂದು ವರಮಹಾಗಣಪತಿ ಹಾಗೂ ನಾಗಚೌಡೇಶ್ವರಿಯ ವರ್ಧಂತಿ ಉತ್ಸವ ನಡೆಯಲಿದೆ.ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಭಾಗವಹಿಸಲಿದ್ದಾರೆ.27ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, 28ರ ಸಂಜೆ ವಾಸುದೇವ ಸ್ಮಾರಕ ವೇದಿಕೆ ಹಾಗೂ ಸಂಪ್ರದಾಯ ಸೇವಾ ಸಂಸ್ಥೆಯ ವಾರ್ಷಿಕೋತ್ಸವ ಮತ್ತು ಸನ್ಮಾನ ಸಮಾರಂಭ ಜರುಗಲಿದೆ. ಯಲ್ಲಾಪುರದಶಾರದಾಂಬಾ ದೇವಸ್ಥಾನದ ಅಧ್ಯಕ್ಷ ಡಿ. ಶಂಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ರಾತ್ರಿ 9.30 ಗಂಟೆಗೆ  `ಕಂಸವಧೆ' ಮತ್ತು  `ಸುದರ್ಶನ ವಿಜಯ' ಎಂಬ ಯಕ್ಷಗಾನ ನಡೆಯಲಿದೆ.

ಪ್ರತಿಕ್ರಿಯಿಸಿ (+)