ಶಾಂತಿಯುತ ಗಣೇಶೋತ್ಸವ: ಮನವಿ

7

ಶಾಂತಿಯುತ ಗಣೇಶೋತ್ಸವ: ಮನವಿ

Published:
Updated:

ಬೀದರ್: ನಗರ ಮತ್ತು ವಿವಿಧ ತಾಲ್ಲೂಕುಗಳಲ್ಲಿ ಈ ವರ್ಷವೂ ಗೌರಿ- ಗಣೇಶ ಹಬ್ಬವನ್ನು ವಿಜೃಂಬಣೆ ಯಿಂದ, ಆಕರ್ಷಕವಾಗಿ ಆಯೋಜಿಸ ಬೇಕು. ಈ ಸಂದರ್ಭದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಒತ್ತು ನೀಡಬೇಕು ಎಂದು ಬುಧವಾರ ನಡೆದ ಪೂರ್ವಭಾವಿ ಸಭೆ ತೀರ್ಮಾನಿಸಿತು.ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪೊಲೀಸ್ ವರಿಷ್ಠಾ ಧಿಕಾರಿ, ಹಿರಿಯ ಅಧಿಕಾರಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾ ರಿಗಳು, ಗಣೇಶ ಮಹಾ ಮಂಡಳದ ಸದಸ್ಯರು ಹಾಜರಿದ್ದರು.ಜಿಲ್ಲಾಧಿಕಾರಿ ಡಾ.ಪಿ.ಸಿ. ಜಾಫರ್ ಅವರು, ಸೆಪ್ಟೆಂಬರ್ 9ರಂದು ಗಣೇಶೋತ್ಸವ ಇದ್ದು, ಸೆ.13ರವರೆಗೂ ಉತ್ಸವ ನಡೆಯ ಲಿದೆ. ಇತರೆ ಜಿಲ್ಲೆಗಳಿಗೆ ಮಾದರಿ ಆಗುವಂತೆ ಉತ್ಸವ ಆಚರಿಸಬೇಕು. ಆಯಾ ತಾಲ್ಲೂಕುಗಳಲ್ಲಿ ಇದ್ದ ಪದ್ಧತಿಗೆ ಅನುಗುಣವಾಗಿ ಉತ್ಸವ ಆಯೋಜಿಸಬೇಕು ಎಂದರು.ಬೀದರ ನಗರದ ಗಣೇಶ ಮಹಾ ಮಂಡಳ ಅಧ್ಯಕ್ಷ ಚಂದ್ರಶೇಖರ ಪಾಟೀಲ, ಅವರು, ಈ ವರ್ಷವೂ ಮಹಾಮಂಡಳದ ವತಿಯಿಂದ ಎಲ್ಲ ಗಣೇಶ ಮಂಡಳಿಗಳಿಗೆ ಅನುಮತಿ  ಮತ್ತು ವಿದ್ಯುತ್ ಸಂಪರ್ಕಕ್ಕೆ ಒಂದೇ ಪರವಾನಗಿ ಪಡೆಯಲಾಗುವುದು ಎಂದು ತಿಳಿಸಿದರು.ಗಣೇಶ ಮೆರವಣಿಗೆ ಹೋಗುವ ಮಾರ್ಗದಲ್ಲಿ ಚರಂಡಿ ಸ್ವಚ್ಛತೆಗೆ ಒತ್ತು ನೀಡಲು ನಗರಸಭೆಗೆ ಸೂಚಿಸಬೇಕು, ಗಣೇಶ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ ಮಾಡಬೇಕು. ಆರೋಗ್ಯ ಇಲಾಖೆ ಯಿಂದ ತುರ್ತು ಚಿಕಿತ್ಸೆಗೆ ವಾಹನ ಸಜ್ಜಾಗಿರಿಸಲು ಒತ್ತು ನೀಡಬೇಕು ಎಂದು ಕೋರಿದರು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ತ್ಯಾಗರಾಜನ್ ಅವರು, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಸಾರ್ವಜನಿ ಕರಿಂದ ಒತ್ತಾಯ ಪೂರ್ವಕವಾಗಿ ದೇಣಿಗೆ ಸಂಗ್ರಹಿಸಬಾರದು ಎಂದು ಸಲಹೆ ಮಾಡಿದರು. ವಿಸರ್ಜನೆ ದಿನ ನಿಗದಿತ ಮಾರ್ಗ ದಲ್ಲಿಯೇ ಮೆರವಣಿಗೆ ಸಾಗಬೇಕು ಎಂಅಅದರು.ಗಣೇಶ ಉತ್ಸವದ ಸಂದರ್ಭದಲ್ಲಿ ಸಾರ್ವಜನಿಕರು ಯಾವುದೇ ಗಾಳಿ ಸುದ್ದಿಗೆ ಕಿವಿಗೊಡಬಾರದು. ಯಾವುದೇ ರೀತಿಯ ಸಮಸ್ಯೆಗಳು ಇದ್ದಲ್ಲಿ ಪೊಲೀಸ್ ಕಂಟ್ರೋಲ್ ರೂಂ ಮತ್ತು ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಕಂಟ್ರೋಲ್ ರೂಂಗೆ ದೂರವಾಣಿ ಮೂಲಕ ಮಾಹಿತಿ ನೀಡಬಹುದು ಎಂದು ಕೋರಿದರು. ಶಿವಶರಣಪ್ಪಾ ವಾಲಿ, ವಿವಿಧ ಸಂಘಟನೆಗಳ ಮುಖಂಡರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry