ಬುಧವಾರ, ನವೆಂಬರ್ 13, 2019
23 °C
ಟಿ.ಬೇಗೂರು,ಅರಿಶಿನಕುಂಟೆ ಉಪಚುನಾವಣೆ

ಶಾಂತಿಯುತ ಮತದಾನ

Published:
Updated:

ನೆಲಮಂಗಲ: ಸ್ಥಳೀಯ ವಿಧಾನ ಸಭಾ ಕ್ಷೇತ್ರದ ಟಿ.ಬೇಗೂರು ಜಿಲ್ಲಾ ಪಂಚಾಯ್ತಿ ಮತ್ತು ಅರಿಶಿನಕುಂಟೆ ತಾಲ್ಲೂಕು ಪಂಚಾಯ್ತಿಗೆ ಭಾನುವಾರ ನಡೆದ ಉಪಚುನಾವಣೆ ಶಾಂತಿಯುತವಾಗಿ ನಡೆದಿದೆ. ಯಾವುದೇ ಅಹಿತಕರ ಘಟನೆ ನಡೆದ ವರದಿಯಾಗಿಲ್ಲ.ಟಿ.ಬೇಗೂರು ಜಿಲ್ಲಾ ಪಂಚಾಯ್ತಿಯ ಒಟ್ಟು 31,419 ಮತದಾರರ ಪೈಕಿ ಸುಮಾರು 22,938 ಮತದಾರರು ಮತಚಲಾಯಿಸಿ ಶೇ 73 ಮತದಾನವಾಗಿದೆ. ಅರಿಶಿನಕುಂಟೆ ತಾಲ್ಲೂಕು ಪಂಚಾಯ್ತಿಯ ಒಟ್ಟು 12,234 ಮತದಾರರ ಪೈಕಿ 6,061 ಮತದಾರರು ಮತಚಲಾಯಿಸಿ ಶೇ 49.54 ಮತದಾನವಾಗಿದೆ.ಕನಿಷ್ಠ - ಗರಿಷ್ಠ ಮತದಾನ: ಜಿ.ಪಂ.ವ್ಯಾಪ್ತಿಯ ವಿಶ್ವೇಶ್ವರಪುರದಲ್ಲಿ 423 ಮತದಾರರ ಪೈಕಿ 157 ಮಂದಿ ಮತ ಚಲಾಯಿಸಿ ಶೇ 37.11 ಮತದಾನವಾದರೆ, ಹುರುಳಿಹಳ್ಳಿಯಲ್ಲಿ 439 ಮತದಾರರ ಪೈಕಿ 421 ಮತ ಚಲಾಯಿಸಿ ಶೇ 95.89 ಗರಿಷ್ಠ ಮತದಾನವಾಗಿದೆ. ತಾ.ಪಂ.ವ್ಯಾಪ್ತಿಯ ಮಲ್ಲರಬಾಣವಾಡಿಯಲ್ಲಿ 918 ಮತದಾರರ ಪೈಕಿ 352 ಮತದಾರರು ಮತ ಚಲಾಯಿಸಿ ಶೇ 38.34 ಕನಿಷ್ಠ ಮತದಾನವಾದರೆ, ಕೋಡಪ್ಪನಹಳ್ಳಿಯಲ್ಲಿ 281 ಮತದಾರರ ಪೈಕಿ 221 ಮತದಾರರು ಮತಚಲಾಯಿಸುವ ಮೂಲಕ ಶೇ.78.64 ಗರಿಷ್ಠ ಮತದಾನವಾಗಿದೆ.ಮತದಾನ ಬಹಿಷ್ಕಾರ: ತಾಲ್ಲೂಕಿನ ಟಿ.ಬೇಗೂರು ಜಿ.ಪಂ.ವ್ಯಾಪ್ತಿಯ ಎರೆಮಂಚನಹಳ್ಳಿ ಗ್ರಾಮದ ಗ್ರಾಮಸ್ಥರು ಗ್ರಾಮಕ್ಕೆ ಚುನಾಯಿತ ಪ್ರತಿನಿಧಿಗಳು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸದಿರುವುದನ್ನು ವಿರೋಧಿಸಿ ಮತದಾನವನ್ನು ಬಹಿಷ್ಕರಿಸಿದರು.ಚುನಾವಣಾಧಿಕಾರಿಗಳು ಮತ ಚಲಾಯಿಸಲು ಮನವೊಲಿಸಲು ಪ್ರಯತ್ನಿಸಿದರೂ ನಂತರ ಕನಿಷ್ಠ ಮತದಾನವಾಯಿತು.ಮತದಾನ ಮುಗಿಯುತ್ತಿದ್ದಂತೆ ಮತ ಯಂತ್ರಗಳನ್ನು ಪೊಲೀಸ್ ಭದ್ರತೆಯಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇಡಲಾಯಿತು.

ಪ್ರತಿಕ್ರಿಯಿಸಿ (+)