ಶಾಂತಿ ಟಿಗ್ಗಾ ಮೊದಲ ಮಹಿಳಾ ಜವಾನ್

7

ಶಾಂತಿ ಟಿಗ್ಗಾ ಮೊದಲ ಮಹಿಳಾ ಜವಾನ್

Published:
Updated:

ನವದೆಹಲಿ (ಪಿಟಿಐ): ಭಾರತೀಯ ಸೇನೆಯಲ್ಲಿ ಪುರುಷರ ಸಾಮ್ರಾಜ್ಯವೆಂದೇ ಹೆಸರಾಗಿದ್ದ ಜವಾನರ ವಿಭಾಗದಲ್ಲಿ ಶಾಂತಿ ತಿಗ್ಗಾ ಎಂಬ 35ರ ಹರೆಯದ ಮಹಿಳೆ ನೇಮಕವಾಗುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎರಡು ಮಕ್ಕಳ ತಾಯಿ ಶಾಂತಿ, ತರಬೇತಿ ಅವಧಿಯ ಅತ್ಯುತ್ತಮ ಜವಾನ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ತಮ್ಮಂದಿಗೆ ತರಬೇತಿಯಲ್ಲಿದ್ದ ಎಲ್ಲ ಪುರುಷ ಜವಾನರಿಗಿಂತಲೂ ಎಲ್ಲ ಪರೀಕ್ಷೆಯಲ್ಲಿಯೂ ಮೇಲುಗೈ ಸಾಧಿಸಿದ್ದು ಶಾಂತಿಯ ವಿಶೇಷವಾಗಿದೆ.969 ರೈಲ್ವೆ ಎಂಜಿನಿಯರ್ ಪ್ರಾದೇಶಿಕ ಸೇನಾ ರೆಜಿಮೆಂಟ್ ಸೇರಿರುವ ಶಾಂತಿ ದೇಶದ ಮೊದಲ ಜವಾನ್ ಆಗಿರುವ ಹೆಗ್ಗಳಿಕೆ ಪಡೆದಿದ್ದಾರೆ.ದೈಹಿಕ ಸಾಮರ್ಥ್ಯ ಹಾಗೂ ಶಸ್ತ್ರಾಸ್ತ್ರಗಳನ್ನು ನಿರ್ವಹಿಸುವಲ್ಲಿ ಎಲ್ಲರಿಗಿಂತಲೂ ಹೆಚ್ಚು ಅಂಕ ಪಡೆದಿರುವ ಅಭ್ಯರ್ಥಿಯೂ ಹೌದು.ಅಂತಿಮ ಸಾಮರ್ಥ್ಯದ ಪರೀಕ್ಷೆಯಲ್ಲಿ 1.5 ಕಿ.ಮೀ. ಓಟವನ್ನು ತಮ್ಮ ಸಹ ಅಭ್ಯರ್ಥಿಗಿಂತ 5 ಸೆಕೆಂಡ್ ಮೊದಲೇ ಓಟ ಪೂರೈಸಿದ್ದಾರೆ. 50 ಮೀಟರ್ ಓಟವನ್ನು 12 ಸೆಕೆಂಡ್‌ಗಳಲ್ಲಿ ಪೂರೈಸಿದ್ದು ಅತಿ ಉತ್ಕೃಷ್ಟ ಸಾಧನೆಯಾಗಿದೆ ಎಂದು ಸೇನಾ ಅಧಿಕಾರಿಗಳು ಹೊಗಳಿದ್ದಾರೆ.2005ರಲ್ಲಿ ತಮ್ಮ ಪತಿಯ ನಿಧನದ ನಂತರ ರೈಲ್ವೇ ಇಲಾಖೆಯಲ್ಲಿ ಅನುಕಂಪದ ಆಧಾರದ ಮೇಲೆ ಕೆಲಸ ಪಡೆದಿದ್ದರು. ಆದರೆ ನಂತರ ನಿವೃತ್ತಿ ಪಡೆದು, ಸೇನೆಗೆ ಸೇರ್ಪಡೆಗೊಳ್ಳಲು ಪ್ರಯತ್ನಿಸಿದ್ದರು. ಈ ಕ್ಷೇತ್ರದಲ್ಲಿ ಇದುವರೆಗೂ ಮಹಿಳೆಯರು ಪ್ರವೇಶಿಸಿಲ್ಲ ಎಂಬ ಬಗ್ಗೆ ಏನೂ ತಿಳಿದಿರಲಿಲ್ಲ.ಆದರೆ ತಾವು ಮಾತ್ರ ಜವಾನ್ ಆಗಲೇಬೇಕು ಎಂಬ ಕನಸು ಹೊತ್ತಿದ್ದರು ಎನ್ನುತ್ತಾರೆ ಶಾಂತಿ. `ದೇಶದ ಮೊದಲ ಮಹಿಳಾ ಜವಾನ್ ಆಗುವ ಮೂಲಕ ನನ್ನ ಕುಟುಂಬ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದೇನೆ ಎಂಬ ತೃಪ್ತಿ ನನಗಿದೆ~ ಎಂದು ಶಾಂತಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry