ಶಾಂತಿ ನೊಬೆಲ್‌ಗೆ ಮಲಾಲಾ ಹೆಸರು

7

ಶಾಂತಿ ನೊಬೆಲ್‌ಗೆ ಮಲಾಲಾ ಹೆಸರು

Published:
Updated:
ಶಾಂತಿ ನೊಬೆಲ್‌ಗೆ ಮಲಾಲಾ ಹೆಸರು

ಓಸ್ಲೊ (ಎಎಫ್‌ಪಿ):  ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೋರಾಡುತ್ತಿರುವ ಮಲಾಲಾ ಯೂಸುಫ್‌ಝೈ ಹಾಗೂ ಮಾನವ ಹಕ್ಕುಗಳ ಕಾರ್ಯಕರ್ತರಾದ ಬೆಲಾರಸ್‌ನ ಅಲೆಸ್ ಬೆಲ್ಯಾಟ್‌ಸ್ಕಿ ಮತ್ತು ರಷ್ಯಾದ ಲ್ಯುಡ್‌ಮಿಲಾ ಅಲೆಕ್ಸೆಯೆವಾ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ.ಈ ಹಿಂದೆ ನೊಬೆಲ್ ಶಾಂತಿ ಪ್ರಶಸ್ತಿ ಪಡೆದವರು, ಸಂಸದರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಹಾಗೂ ಅಂತರರಾಷ್ಟ್ರೀಯ ಸಂಸ್ಥೆಗಳ ಸದಸ್ಯರು ಈ ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದು. ಅಲ್ಲದೇ ತಾವು ಸೂಚಿಸಿರುವ ಹೆಸರುಗಳನ್ನು ಬಹಿರಂಗಪಡಿಸುವ ಅವಕಾಶ ಇವರಿಗೆ ಇರುತ್ತದೆ.ಫ್ರಾನ್ಸ್, ಕೆನಡಾ, ನಾರ್ವೆ ಸಂಸದರು ಪ್ರತ್ಯೇಕವಾಗಿ ಈ ಪ್ರಶಸ್ತಿಗೆ ಮಲಾಲಾ ಹೆಸರನ್ನು ಪ್ರಸ್ತಾಪಿಸಿದ್ದಾರೆ.

ನಾರ್ವೆಯ  ಸಂಸದರಿಬ್ಬರು ಬೆಲ್ಯಾಟ್‌ಸ್ಕಿ ಮತ್ತು ಅಲೆಕ್ಸೆಯೆವಾ ಹೆಸರು ಪ್ರಸ್ತಾಪಿಸಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry