ಶುಕ್ರವಾರ, ಏಪ್ರಿಲ್ 23, 2021
24 °C

ಶಾಂತಿ ಸ್ಥಾಪನೆಗೆ ಎಲ್ಲರೂ ಶ್ರಮಿಸಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಜಗತ್ತಿನಲ್ಲಿ ಶಾಂತಿಯನ್ನು ಸ್ಥಾಪಿಸಲು ಎಲ್ಲರೂ ಶ್ರಮಿಸಬೇಕು~ ಎಂದು ರೆವರೆಂಡ್ ಜೆ.ಡಿ. ಡೇವಿಡ್ ರಾಜನ್ ಹೇಳಿದರು.ಭಾನುವಾರ ನಗರದ ಸೆಂಟ್ ಮಾರ್ಕ್ಸ್ ಕೆಥೆಡ್ರಲ್ ಚರ್ಚ್‌ನಲ್ಲಿ ನಡೆದ `ವೀರಮರಣವನ್ನಪ್ಪಿದ ಸೈನಿಕರ ಸಂಸ್ಮರಣ~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.`ಯುದ್ಧದಲ್ಲಿ ಹೋರಾಡಿ ಮಡಿದವರನ್ನು ಸ್ಮರಿಸಬೇಕು ಮತ್ತು ಅವರನ್ನು ಗೌರವಿಸಬೇಕು. ಅವರ ನಂತರ ಅವರ ಕುಟುಂಬದವರ ಸ್ಥಿತಿಗತಿಯನ್ನು ಸುಧಾರಿಸಲು ಪ್ರಯತ್ನಿಸಬೇಕು~ ಎಂದರು.`ಮೊದಲನೆಯ ಜಾಗತಿಕ ಯುದ್ಧ ನಡೆದಾಗ ಲಕ್ಷಾಂತರ ಸೈನಿಕರು ತಮ್ಮ ತಮ್ಮ ದೇಶಕ್ಕಾಗಿ ಹೋರಾಡಿ ಜೀವವನ್ನು ತೆತ್ತರು. 1918ರ ನವೆಂಬರ್ 11 ರಂದು ಮೊದಲ ಜಾಗತಿಕ ಯುದ್ಧವು ಅಂತ್ಯಗೊಂಡ ದಿನ.ಆದ್ದರಿಂದ, ಆ ಯುದ್ಧದಲ್ಲಿ ಮಡಿದ ಸೈನಿಕರನ್ನು ಸ್ಮರಿಸಿ ಅವರಿಗೆ ಶ್ರದ್ದಾಂಜಲಿಯನ್ನು ಸಲ್ಲಿಸುವಂತಹ ಪವಿತ್ರ ದಿನವೆಂದು ನ.11 ನ್ನು ಜಗತ್ತಿನಾದ್ಯಾಂತ ಆಚರಣೆ  ಮಾಡಲಾಗುತ್ತಿದೆ~ ಎಂದು ಹೇಳಿದರು.

`ಆ ಯುದ್ಧದಲ್ಲಿ ನಾವು ಕಳೆದುಕೊಂಡಿದ್ದು ಬಹಳಷ್ಟಿದೆ. ಜಗತ್ತಿನ ಬಹುತೇಕ ದೇಶಗಳು ಯುದ್ಧದಲ್ಲಿ ಭಾಗವಹಿಸಿದ್ದವು. ಅದರಲ್ಲಿ ಸತ್ತವರು ಮತ್ತು ಕೈ ಕಾಲು ಕಳೆದುಕೊಂಡು ಅತೀವ ನೋವುಗಳನ್ನು ಅನುಭವಿಸಿದವರು ಅಸಂಖ್ಯಾತ ಜನರು. ಈ ಯುದ್ಧಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ. ಆದ್ದರಿಂದ ಮುಂದೆಯಾದರೂ ಈ ಯುದ್ಧಗಳಿಗೆ ಕಡಿವಾಣ ಹಾಕಬೇಕು. ಶಾಂತಿಯನ್ನು ಸ್ಥಾಪಿಸಲು ಪ್ರಯತ್ನಿಸಬೇಕು~ ಎಂದು ಹೇಳಿದರು.ನಿವೃತ್ತ ಏರ್ ಚೀಫ್ ಮಾರ್ಷಲ್ ಎಫ್.ಎಚ್. ಮೇಜರ್ ಮಾತನಾಡಿ, `ಜಗತ್ತಿನಲ್ಲಿರುವ ಯಾರಿಗೂ ಯುದ್ಧ ಮಾಡಿ ಶಾಂತಿಯನ್ನು ಕದಡಲು ಇಷ್ಟವಿಲ್ಲ. ಆದರೆ, ನಮ್ಮ ನಮ್ಮ ದೇಶದ ಪ್ರಶ್ನೆ ಬಂದಾಗ ನಾವು ಹೋರಾಡಲೇ ಬೇಕಾಗುತ್ತದೆ~ ಎಂದರು.ಸೈನಿಕರು ತಮ್ಮ ಮನೆಗಳನ್ನು, ತಮ್ಮವರನ್ನು ತೊರೆದು, ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಹೋರಾಡುತ್ತಾರೆ. ಅವರ ಕಾರ್ಯವನ್ನು ಗುರುತಿಸಿ, ಅವರಿಗೆ ಗೌರವ ಸಲ್ಲಿಸಬೇಕು~ ಎಂದು ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.