ಶಾಂತೇಶ್ವರ ಜಾತ್ರೋತ್ಸವ ಇಂದು

7

ಶಾಂತೇಶ್ವರ ಜಾತ್ರೋತ್ಸವ ಇಂದು

Published:
Updated:

ರೋಣ: `ಭಕ್ತರ ಸಿದ್ಧಿಗೆ ಶಾಂತೇಶ್ವರ ಗದ್ದುಗಿ' ಎನಿಸಿದ ದಕ್ಷಿಣ ಕಾಶಿ ಎಂದೇ ಕರೆಯುವ ನೆಲ್ಲೂರಿನ ಶಾಂತೇಶ್ವರ ಜಾತ್ರೋತ್ಸವ ಇದೇ 2ರಂದು ನಡೆಯಲಿದೆ.ನಿಸರ್ಗ ರಮಣೀಯತೆಯ ಮಧ್ಯೆ ಸೋಮೇಶ್ವರ, ಕಲ್ಮೇಶ್ವರ ಪುಷ್ಕರಣಿಗಳನ್ನೊಳಗೊಂಡು ಪ್ರಕೃತಿಯ ಮಧ್ಯದಲ್ಲಿ ಇರುವ ತಾಣವೇ  ನೆಲ್ಲೂರಿನ ಶಾಂತೇಶ್ವರ ದೇವಾಲಯ.ಅಬಿಂಧು ತನ್ನ ಶಕ್ತಿಯನ್ನ ಮೂರು ಭಾಗವಾಗಿ ಪ್ರಕಟಿಸಿ ಸೃಷ್ಟಿ, ಸ್ಥಿತಿ, ಲಯಗಳಿಗಾಗಿ ಬ್ರಹ್ಮ, ವಿಷ್ಣು, ಮಹೇಶ್ವರರನ್ನು  ಸೃಷ್ಟಿಸಿತು. ಮರ್ತ್ಯದಲ್ಲಿ ಅಸುರರ ಹಾವಳಿ ಅತಿಯಾದಾಗ ಸಕಲ ದೇವತೆಗಳು ಮಹೇಶ್ವರನಿಗೆ ಮೊರೆ ಹೊದರು. ಆಗ ಮಹೇಶ್ವರನು ತನ್ನ ಶಕ್ತಿಯನ್ನು ಮೂರು ವಿಧವಾಗಿ ಪ್ರಕಟಿಸಿದನು.ಸೃಷ್ಟಿಗಾಗಿ ಮಹಾಕೋಟೇಶ್ವರನಾಗಿ (ಬದಾಮಿ ತಾಲ್ಲೂಕಿನ ಗ್ರಾಮ), ಸ್ಥಿತಿಗೆ ಶಾಂತೇಶ್ವರನಾಗಿ (ರೋಣ ತಾಲ್ಲೂಕಿನ ನೆಲ್ಲೂರ), ಲಯಕ್ಕೆ ಕಾಲ ಭೈರವನಾಗಿ (ಸಮೀಪದ ಕಾಲಕಾಲೇಶ್ವರ) ಮೂರು ವಿಭಿನ್ನ ಶಿಖರಗಳ ಮೇಲೆ ನೆಲೆ ನಿಂತನು. ಈ ಮೂರು ತಾಣಗಳನ್ನು ದಕ್ಷಿಣ ಕಾಶಿಯಂದೇ ಭಕ್ತ ಸಮೂಹ ಗುರುತಿಸಿದೆ.ಐತಿಹಾಸಿಕ ಹಿನ್ನಲೆ: ವಿಜಯನಗರ ಸಾಮ್ರೋಜ್ಯದ ಸುವರ್ಣ ಯುಗದ ಆಳ್ವಿಕೆಗೆ ಒಳಪಟ್ಟ ಕಳಿಂಗ ಪರ್ವತದ ಉದ್ದಕ್ಕೂ ವಿಜಯನಗರದ ಅರಸರು ಸಂಚರಿಸಿ ಜಾಲಂದ್ರ ಗಿರಿಯ ಉದ್ದಕ್ಕೂ ತಮ್ಮ ಕುರುಹುಗಳನ್ನು ಬಿಟ್ಟಿರುವುದು ಐತಿಹಾಸಿಕ ದಾಖಲೆಗಳ ನೆನಪು.ಜಾಲಂದ್ರರಗಿರಿಯ ಹಿಂಬಾಗಕ್ಕೆ ಕಾಣಿಸಿಕೊಂಡ `ಆನೆಗುಂದಿ ಬಸವ' ಇಂದಿಗೂ ನೂಡುಗರನ್ನ ಚಕಿತಗೊಳಿಸುತ್ತದೆ

ಆನೆಗುಂದಿಯ ರಾಜ ದಂಪತಿ ಶಿವನಿಗೆ  'ಸಂತಾನ ಭಾಗ್ಯ' ಕರುಣಿಸು ಎಂಬ ಹರಕೆ ಹೊತ್ತ ಪರಿಣಾಮ ವರ್ಷ ತುಂಬುವುದರೊಳಗಾಗಿ  ಮಹಾರಾಣಿ ಗಂಡು ಮಗುವಿಗೆ ಜನ್ಮವಿತ್ತಳು. ಅವರಿಗೆ ಅಂದಿನಿಂದ ಶಿವನ ಮೇಲೆ ಭಕ್ತಿ, ಭಾವ ಹುಟ್ಟಿ ತಾನೆ ಶಿವನ ಕಿಂಕರ ಎಂಬ ಭಾವನೆಯಿಂದ ಕಿಂಕರನಾದ ವೃಷಭನಾಥನ ಚಿತ್ರವನ್ನು ಶಿಲೆಯಲ್ಲಿ ಕೆತ್ತಿಸಿದ್ದು ಜಾಲಂದ್ರಗಿರಿಯ ಹಿಂಭಾಗದಲ್ಲಿ ಕಾಣಬಹುದು.  ಹೀಗಾಗಿಯೇ ಈ ನಂದಿಯನ್ನು ಆನೆಗುಂದಿ ಬಸವಣ್ಣನೆಂದು ಕರೆಯಲಾಗುತ್ತದೆ. ಶ್ರಾವಣ ಮಾಸದ ಕೊನೆಯ ಸೋಮವಾರ ಇಲ್ಲಿ ರಥೊತ್ಸವ ಜರುಗತ್ತದೆ. ರೈತ ಮುಖಂಡ ಕುಡ್ಲೆಪ್ಪ ಗುಡಿಮನಿ, ಶಾಂತಪ್ಪ ಗೌಡರ, ಈರಣ್ಣ ಕರಡಿಮಠ, ರಾಚಯ್ಯ ಕರಡಿಮಠ, ಕಳಕಯ್ಯ ಹೊಸಳ್ಳಿ, ರಾಜನಗೌಡ ಗೌಡರ, ಪ್ರಕಾಶ ಕುರಹಟ್ಟಿ, ಬಸಯ್ಯ ಹಿರೇಮಠ, ಮಾಂತಯ್ಯ ಹಿರೇಮಠ, ಮಹಾಂತೇಶ ಬೆನಹಾಳ, ಕನಕಪ್ಪ ಮಡಿವಾಳರ, ಎಂ.ಪಿ ಪಾಟೀಲ ಮುಂತಾದವರಿಂದ ರಥದ ಗಾಲಿಗೆ ಟೆಂಗು ಸಮರ್ಪಣೆಯಾದ ಬಳಿಕ ರಥೋತ್ಸವ ಪ್ರಾರಂಂಭವಾಗುವುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry