`ಶಾಡೋ' ಚಿತ್ರದಲ್ಲಿ ವೆಂಕಿ ಕಮಾಲ್

7

`ಶಾಡೋ' ಚಿತ್ರದಲ್ಲಿ ವೆಂಕಿ ಕಮಾಲ್

Published:
Updated:
`ಶಾಡೋ' ಚಿತ್ರದಲ್ಲಿ    ವೆಂಕಿ ಕಮಾಲ್

ತೆಲುಗು ಆ್ಯಕ್ಷನ್ ಸ್ಟಾರ್ ವಿಕ್ಟರಿ ವೆಂಕಟೇಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ `ಶಾಡೋ' ಚಿತ್ರೀಕರಣ ಮುಗಿಯುವ ಹಂತಕ್ಕೆ ಬಂದಿದೆಯಂತೆ. ಟಾಲಿವುಡ್‌ನಲ್ಲಿ ಸಾಕಷ್ಟು ಹವಾ ಹುಟ್ಟು ಹಾಕಿರುವ `ಶಾಡೋ' ಬಗ್ಗೆ ನಿರ್ಮಾಪದ ಪರುಚುರಿ ಕೀರ್ತಿ ಮಾತನಾಡಿದ್ದಾರೆ.`ಶಾಡೋ ಚಿತ್ರದ ಚಿತ್ರೀರಣದ ಕೊನೆಯ ಹಂತ ತಲುಪಿದೆ. ಸದ್ಯದಲ್ಲೇ ಚಿತ್ರೀಕರಣ ಪೂರ್ಣಗೊಳ್ಳಲಿದೆ. ವಿಕ್ಟರಿ ವೆಂಕಟೇಶ್ ಅವರ ಆ್ಯಕ್ಷನ್ ಈ ಚಿತ್ರದ ಹೈಲೈಟ್.  ಈ ಚಿತ್ರದಲ್ಲಿ ವೆಂಕಿಯನ್ನು ನೋಡಿದ ಪ್ರೇಕ್ಷಕರೆಲ್ಲರಿಗೂ ಅವರು ಖಂಡಿತವಾಗಿಯೂ ಇಷ್ಟವಾಗುತ್ತಾರೆ. ಚಿತ್ರದ ಟ್ರೇಲರ್ ನೋಡಿದವರೆಲ್ಲಾ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ. ವೆಂಕಿ ಅಭಿಮಾನಿಗಳು ಶಾಡೋ ಸಿನಿಮಾ ನೋಡಲು ಹಾತೊರೆಯುತ್ತಿದ್ದಾರೆ' ಎಂದು ಕೀರ್ತಿ ಹೇಳಿದ್ದಾರೆ.ಚಿತ್ರದಲ್ಲಿ ಆ್ಯಕ್ಷನ್‌ಗೆ ಸಿಕ್ಕಾಬಟ್ಟೆ ಸ್ಕೋಪ್ ನೀಡಲಾಗಿದೆ. ಆದಗ್ಯೂ ನಾವು ಪ್ರೇಕ್ಷಕರನ್ನು ರಂಜಿಸಲು ಬೇಕಿರುವ ಯಾವ ಅಂಶವನ್ನು ಕಡೆಗಣಿಸಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.ಶಾಡೋ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶನ ಮಾಡಿದ್ದು, ತಪಸಿ ಪನ್ನು, ಮೆಕಾ ಶ್ರೀಕಾಂತ್, ಮಾಧುರಿಮಾ, ಎಂ.ಎಸ್.ನಾರಾಯಣ, ನಾಗಬಾಬು, ಜಯಪ್ರಕಾಶ್ ರೆಡ್ಡಿ ಮೊದಲಾದವರು ಪ್ರಮುಖ ತಾರಾಗಣದಲ್ಲಿದ್ದಾರೆ. ಅಂದಹಾಗೆ, `ಶಾಡೋ' ಚಿತ್ರದಲ್ಲಿನ ವಿಕ್ಟರಿ ವೆಂಕಟೇಶ್ ಅವರ ಆ್ಯಕ್ಷನ್ ಕಣ್ತುಂಬಿಕೊಳ್ಳಬೇಕೆಂದರೆ ಪ್ರೇಕ್ಷಕರು ಏಪ್ರಿಲ್‌ವರೆಗೂ ಕಾಯಲೇಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry