ಶಾಪ ವಿಮೋಚನೆ ಎಂದು?

7

ಶಾಪ ವಿಮೋಚನೆ ಎಂದು?

Published:
Updated:

ಚಾಮರಾಜನಗರಕ್ಕೆ ಇರುವ ಕೃತಕ ಶಾಪ ಯಾವಾಗ ಪರಿಹಾರ ಆಗಲಿದೆ? ಮೊದಲು ನಗರದ ಹೆಸರು ‘ಅರಿಕುಠಾರ’. ಅರ್ಥ: ‘ಶತ್ರು ಗಳಿಗೆ ಕೊಡಲಿಯಂತಿರುವವನು’.ಇಂತಹ ಹೆಸರಿನ ಊರಿಗೆ ಹೇಗೆ ಮೂಢನಂಬಿಕೆ ಗಂಟು ಬಿತ್ತೋ ತಿಳಿಯದು. ಅದನ್ನು ನಂಬಿದ ರಾಜಕಾರಣಿಗಳ ವಿವೇಚನಾ ಶಕ್ತಿ ಹೇಗಿರಬಹುದು!? ಹಿಂದಿದ್ದ ಹಲವು ಮುಖ್ಯಮಂತ್ರಿಗಳು ‘ಅಧಿಕಾರ ಹೋಗುತ್ತೆ’ ಎಂದು ನಂಬಿ ಚಾಮರಾಜನಗರಕ್ಕೆ ಭೇಟಿ ಕೊಡಲೇ ಇಲ್ಲ. ಆದರೂ ಅಧಿಕಾರ ಹೋಗಿಯೇ ಬಿಟ್ಟಿತು.ಪಕ್ಕದ ಜಿಲ್ಲೆಯವರೇ ಆದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನೂ್ನ ಭೇಟಿ ಕೊಟ್ಟಿಲ್ಲ. ಬಂದಿದ್ದರೆ ಅವರ ‘ನೂರು ದಿನ ಸಾಧನೆ’ಗಳ ಪೈಕಿ ಇದು ಅಗ್ರ ಸ್ಥಾನದಲ್ಲಿ ಇರುತ್ತಿತ್ತು.  ‘ಅರಿಕುಠಾರ’ಕ್ಕೆ ಭೇಟಿ ಕೊಟ್ಟರೆ ಶತ್ರುಗಳು ನಾಶವಾಗುತ್ತಾರೆಂದು ತಿಳಿಯ

ಬೇಕಾಗಿತ್ತು.ನಗರದ ನಿವಾಸಿಗಳಾದ ನಮ್ಮಂಥವರಿಗೆ ಈ ಮೂಢನಂಬಿಕೆಯಿಂದ ಎಷ್ಟು ಬೇಜಾರು ಆಗಿದೆ ಎಂಬುದನ್ನು ಮುಖ್ಯಮಂತ್ರಿಯವರು  ಅರ್ಥ ಮಾಡಿಕೊಳ್ಳಬೇಕು. ಈಗಲಾದರೂ ನಗರಕ್ಕೆ ಭೇಟಿ ಕೊಡುವ ಮನಸ್ಸು ಮಾಡಬೇಕು. ನಗರದೊಡನೆ ನಂಟು ಹೊಂದಿರುವ ಸಚಿವರು ಅವರನ್ನು ನಗರಕ್ಕೆ ಕರೆತರಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry