ಶುಕ್ರವಾರ, ಮೇ 14, 2021
29 °C
ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್

ಶಾಮದೀಪ್, ಶಶಾಂಕ್‌ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಿರಿಯರ ವಿಭಾಗದಲ್ಲಿ ಕೆಲವೇ ಕೆಲವು ಶ್ರೇಯಾಂಕ ಆಟಗಾರರು ಪ್ರಿಕ್ವಾರ್ಟರ್‌ಫೈನಲ್ ತಲುಪಲು ಮೂರು ಗೇಮ್‌ಗಳನ್ನು ಆಡಬೇಕಾಯಿತು. ಉಳಿದಂತೆ, ಗುರುವಾರ ಲಿ-ನಿಂಗ್ ಫೈವ್ ಸ್ಟಾರ್ ರಾಜ್ಯ ರ‌್ಯಾಂಕಿಂಗ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಹೆಚ್ಚಿನ ಶ್ರೇಯಾಂಕಿತ ಆಟಗಾರರು ನೇರ ಸೆಟ್‌ಗಳಿಂದ ಜಯಗಳಿಸಿ ಅಂತಿಮ 16ರ ಸುತ್ತನ್ನು ತಲುಪಿದರು.ಇಲ್ಲಿ ನಡೆಯುತ್ತಿರುವ ಈ ಟೂರ್ನಿಯ 13 ವರ್ಷದೊಳಗಿನವರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಎಂಟನೇ ಶ್ರೇಯಾಂಕದ ಶಾಮದೀಪ್ ಮಂಡಲ್ 21-18, 17-21, 24-22ರಲ್ಲಿ ಸೋಲಿಸಲು ಪ್ರಯಾಸಪಟ್ಟನು. ನಾಲ್ಕನೇ ಶ್ರೇಯಾಂಕದ ಶಶಾಂಕ್ ರೆಡ್ಡಿ (ಎಸ್‌ಬಿಎ) ಪ್ರಿಕ್ವಾರ್ಟರ್‌ಫೈನಲ್ ತಲುಪುವ ಮೊದಲ ಹತ್ತರ ಹರೆಯದ ಎಚ್.ವಿ.ಸಂತೃಪ್ತ್ ಎದುರು ಪರದಾಡಬೇಕಾಯಿತು. ಶಶಾಂಕ್ ಗೆದ್ದ ಅಂತರ 21-4, 17-21, 21-18.ಫಲಿತಾಂಶಗಳು ಇಂತಿವೆ:

15 ವರ್ಷದೊಳಗಿನವ ಬಾಲಕರ ಸಿಂಗಲ್ಸ್: ಕೆ.ಅಭಿರಾಮ್ 12-21, 21-19, 21-10ರಿಂದ ವಿಠ್ಠಲ್‌ಜಿ ವಿರುದ್ಧ; ಶಮಂತ್ ಕಿದಿಯೂರ್ 21-10, 21-15ರಿಂದ ಸಿ.ಎಸ್.ಸಾಕೇತ್ ವಿರುದ್ಧ; ಸೈಫ್ ಅಲಿ 21-5, 21-8ರಿಂದ ಶ್ಯಾಮ್‌ದೀಪ್ ಮಂಡಲ್ ವಿರುದ್ಧ; ಕೆ.ಸಾಯಿಪ್ರತೀಕ್ 21-13, 21-10ರಿಂದ ಅನಿರುದ್ಧ ರಾವ್ ವಿರುದ್ಧ; ಅಶ್ವಿನ್ ಸಿಂಹ 21-18, 17-21, 21-18ರಿಂದ ಎಸ್.ಆಕಾಶ್ ವಿರುದ್ಧ; ವಿಷ್ಣು ಆರ್.ಪೌರ 21-8, 21-11ರಿಂದ ನಿಖಿಲ್ ವಿ.ದೇಸಾಯಿ ವಿರುದ್ಧ; ಎಸ್.ಅವಿನಾಶ್ 21-18, 13-21, 21-12 ಎಂ.ಆರ್.ವಿಖ್ಯಾತ್ ವಿರುದ್ಧ; ಅಥರ್ವ ನಿತಿನ್ ಮೊಘೆ 12-21, 21-9, 21-15ರಿಂದ ಶ್ರೀಕಾರ್ ರಾಜೇಶ್ ವಿರುದ್ಧ ಜಯ ಗಳಿಸಿದರು.17 ವರ್ಷದೊಳಗಿನವರ ವಿಭಾಗ: ಗೋವರ್ಧನ್ ಶೆಣೈ 21-17, 21-19ರಿಂದ ನಿಖಿಲ್ ಶ್ಯಾಮ್ ಶ್ರೀರಾಮ್ ವಿರುದ್ಧ; ಯಶ್ ಅಮೃತ್ ಲಾಡ್ 21-16, 21-18ರಿಂದ ಎಸ್.ಸಾಗರ್ ವಿರುದ್ಧ; ಬಿ.ಅಭಿಲಾಷ್ 11-21, 22-20, 21-17ರಿಂದ ಸಿದ್ದಾರ್ಥ ಶಿರೋಡ್ಕರ್ ವಿರುದ್ಧ; ಬಿ.ಎಂ.ರಾಹುಲ್ ಭಾರದ್ವಾಜ್ 21-13, 21-10ರಿಂದ ವಿಷ್ಣು ಪೌರ ವಿರುದ್ಧ; ಇ.ಎಸ್.ಸಿದ್ದಾರ್ಥ 21-13, 21-14ರಿಂದ ಎಂ.ಎಲ್.ಕೆವಿನ್ ವಿರುದ್ಧ; ಎ.ಆಕಾಶ್ 21-17, 19-21, 21-13ರಿಂದ ಸಿ.ಎಸ್.ಮಂಜೇಶ್ ವಿರುದ್ಧ; ಅನಿಶ್ ಉಪಾಧ್ಯಾಯ 21-9, 12-21, 22-10ರಿಂದ ಜಿ.ಎ.ಪಿಂಟೊ ವಿರುದ್ಧ; ಎಸ್.ಅಕ್ಷಯ್ ಶ್ರೀನಿವಾಸ್ 17-21, 21-15, 21-15ರಿಂದ ಸೈಫ್ ಅಲಿ ವಿರುದ್ಧ ಗೆಲುವು ಪಡೆದರು.19 ವರ್ಷದೊಳಗಿನವರ ವಿಭಾಗ: ವಸಂತ್‌ಕುಮಾರ್ 21-13, 21-16ರಿಂದ ರಾಹುಲ್ ಬಿ. ಪ್ರಸಾದ್ ವಿರುದ್ಧ, ಚೇತನ್‌ರಾಜ್ 19-21, 21-12, 21-18ರಿಂದ ಗೋವರ್ಧನ್ ಶೆಣೈ ವಿರುದ್ಧ, ಜಿ.ಕಿರಣ್‌ಕುಮಾರ್ 21-16, 16-21, 21-9ರಿಂದ ಸುದೀಪ್ ಸುರೇಶ್ ವಿರುದ್ಧ ಗೆದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.