ಶುಕ್ರವಾರ, ಜನವರಿ 17, 2020
23 °C

ಶಾರುಖ್‌ ಪ್ರೀತಿಯ ಗುಟ್ಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಿಲ್‌ ತೊ ಪಾಗಲ್‌ ಹೈ’ ಚಿತ್ರದ ರಾಜ್‌, ‘ಕುಛ್‌ ಕುಛ್‌ ಹೋತಾ ಹೈ’ ಚಿತ್ರದ ರಾಹುಲ್‌, ‘ವೀರ್‌ ಝರಾ’ ಚಿತ್ರದ ವೀರ್‌ ಮುಂತಾದ ಪ್ರೇಮಿಗಳ ಪಾತ್ರ ನಿರ್ವಹಿಸಿ ಯುವತಿಯರ ಮನಕದ್ದ ಶಾರುಖ್‌ ಖಾನ್‌ ಹೆಂಗಳೆಯರ ಹೃದಯ ಗೆಲ್ಲುವ ಗುಟ್ಟನ್ನು ಹೇಳಿಕೊಂಡಿದ್ದಾರೆ.‘ಪ್ರೀತಿ ಮತ್ತು ಪ್ರೇಮವೆಂದರೆ ಕೇವಲ ಮನಸು ಕದಿಯುವುದು ಮಾತ್ರವಲ್ಲ ಹೃದಯ ಗೆಲ್ಲುವುದು. ಅದಕ್ಕಾಗಿ ಹೆಣ್ಣುಮಕ್ಕಳ ಮುಂದೆ ಸಿಕ್ಸ್‌ಪ್ಯಾಕ್‌ ಸುಂದರನಾಗಿ ನಿಂತರೆ ಯಾವ ಪ್ರಯೋಜನವೂ ಆಗದು. ಆದರೆ ಹೆಂಗರಳು ಇದ್ದರೆ ಅವರ ಹೃದಯವನ್ನು ಗೆಲ್ಲುವುದು ಸಾಧ್ಯ.ನಿಜವಾದ ಪೌರುಷವೆಂದರೆ ನಮ್ಮ ಬಲವನ್ನು ತೋರುವುದಾಗಲೀ, ಹೆಣ್ಣುಮಕ್ಕಳನ್ನು ಆಳುವುದಾಗಲೀ ಅಲ್ಲ. ನಮ್ಮೊಳಗಿನ ಅಂತಃಕರಣವನ್ನು ವ್ಯಕ್ತಪಡಿಸುವುದೇ ಪೌರುಷ. ನಾನು ನನ್ನ ಅಂತಃಕರಣದ ಬಟ್ಟಲನ್ನು ಸದಾ ತೆರೆದಿಟ್ಟಿರುತ್ತೇನೆ. ಇದು ಪ್ರೀತಿಯನ್ನು ಸದಾ ಬಲಪಡಿಸುತ್ತದೆ.ಯಾವುದೇ ಕಾರಣಕ್ಕೂ ನಿಮ್ಮ ಹುಡುಗಿಯ ಮುಂದೆ ಯಾರೊಂದಿಗೂ ಜಗಳಕ್ಕಿಳಿಯಬೇಡಿ.ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬೇಡಿ. ಮಹಿಳೆಯರ ಬಗ್ಗೆ ಗೌರವ, ಆದರ ನಿಮ್ಮ ನಡೆ ನುಡಿಯಲ್ಲಿ ವ್ಯಕ್ತವಾಗಲಿ. ತಿರಸ್ಕಾರ ಅಥವಾ ಕೀಳು ಎಂಬಂಥ ಭಾವಗಳು ಯಾವುದೇ ಬಗೆಯ ಮಾತುಗಳಲ್ಲಿ ಆಗಲಿ, ನಡೆ, ನಿಲುವಿನಲ್ಲಿಯೇ ಆಗಲಿ ವ್ಯಕ್ತವಾಗದಿರಲಿ.

ಸಾಧ್ಯವಿದ್ದಷ್ಟೂ ನಿಮ್ಮ ಹುಡುಗಿಯೊಂದಿಗೆ ಸೌಮ್ಯ ಸ್ವಭಾವದವರಾಗಿರಿ.ಸಣ್ಣ ಸಣ್ಣ ವಿಷಯದೆಡೆಗೆ ಗಮನವಿರಲಿ. ಹುಡುಗಿಯೊಂದಿಗಿದ್ದಾಗ ಲಿಫ್ಟ್‌ ಪ್ರವೇಶಿಸಲು ಅವರಿಗೇ ಆದ್ಯತೆ ನೀಡುವುದು, ಬಾಗಿಲು ತೆರೆಯುವುದು, ಊಟಕ್ಕೆ ಆಚೆ ಹೋದರೆ ಅವರಿಗೇ ಮೊದಲು ಕೂರಲು ಅನುಕೂಲ ಮಾಡುವುದು, ಇಂಥ ಸಣ್ಣ ಸಣ್ಣ ವಿಷಯಗಳು ನಿಮ್ಮ ಬಗೆಗೆ ಆದರ ಮತ್ತು ಪ್ರೀತಿ ಹುಟ್ಟುವಂತೆ ಮಾಡುತ್ತದೆ.’

 

ಪ್ರತಿಕ್ರಿಯಿಸಿ (+)