ಭಾನುವಾರ, ಜನವರಿ 19, 2020
29 °C
ಲಿಂಗ ಪತ್ತೆ ಪ್ರಕರಣ

ಶಾರುಖ್‌, ಮುಂಬೈ ಮಹಾನಗರ ಪಾಲಿಕೆಗೆ ಹೈಕೋರ್ಟ್‌ ನೊಟೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ(ಪಿಟಿಐ): ಬಾಡಿಗೆ ತಾಯಿ ಮೂಲಕ ಮೂರನೇ ಮಗು ಪಡೆದ ಬಾಲಿವುಡ್‌ ನಟ ಶಾರುಖ್‌ ದಂಪತಿ, ಜಸ್ಲೋಕ್‌ ಆಸ್ಪತ್ರೆ ಹಾಗೂ ಮುಂಬೈ ಮಹಾ­ನಗರ ಪಾಲಿ­ಕೆಗೆ ಬಾಂಬೆ ಹೈಕೋರ್ಟ್‌ ನೊಟೀಸ್‌ ಜಾರಿ ಮಾಡಿದೆ.ಮಗುವಿನ ಜನನ ದಾಖಲೆಗಳನ್ನು ಒದ­ಗಿ­ಸು­ವಂತೆ ಸಲ್ಲಿಸಿದ ಅರ್ಜಿಯನ್ನು ಮ್ಯಾಜಿ­ಸ್ಟ್ರೇಟ್‌ ನ್ಯಾಯಾಲಯ ತಿರಸ್ಕರಿ­ಸಿ­ದ್ದರಿಂದ ಸಾಮಾಜಿಕ ಕಾರ್ಯಕರ್ತೆ ವರ್ಷಾ ದೇಶಪಾಂಡೆ ಅವರು ಹೈ­ಕೋರ್ಟ್‌­­­ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಸವ­ಪೂರ್ವದಲ್ಲಿ ಲಿಂಗ ಪತ್ತೆ ನಿಷೇಧ ಕಾಯ್ದೆಯನ್ನು ಉಲ್ಲಂಘಿಸಿ ನಿಯ­ಮ­­ಬಾಹಿರವಾಗಿ ಮಗುವಿನ ಲಿಂಗ ಪತ್ತೆ ಮಾಡಿದ್ದರು ಎಂದು ಆರೋ­ಪಿಸಿ ವರ್ಷಾ ಅವರು ಶಾರುಖ್‌ ದಂಪತಿ, ನಗ­ರದ ಜಸ್ಲೋಕ್‌ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಮ್ಯಾಜಿ­ಸ್ಟ್ರೇಟ್‌ ನ್ಯಾಯಾ­ಲಯದಲ್ಲಿ ದೂರು ಸಲ್ಲಿಸಿದ್ದರು.ಅಲ್ಲದೇ  ಮೂರನೇ ಮಗು ಅಬ್ರಾಮ್‌ ಜನ­ನದ ವಿವರ­ಗಳನ್ನು ಶಾರುಖ್‌ ದಂಪತಿ ಹಾಗೂ ಮುಂಬೈ ಮಹಾನಗರ ಪಾಲಿಕೆ ಒದಗಿ­ಸು­ವಂತೆ ನ್ಯಾಯಾಲಯ­ದಲ್ಲಿ ಮನವಿ ಮಾಡಿದ್ದರು. ಆದರೆ ನ್ಯಾಯಾಲಯ ಶಾರುಖ್‌ ದಂಪತಿ ಲಿಂಗ ಪತ್ತೆ ನಿಷೇಧ  ಕಾಯ್ದೆಯನ್ನು ಉಲ್ಲಂಘಿ­ಸಿ­ಲ್ಲವೆಂದು ತಿಳಿಸಿ, ಅರ್ಜಿಯನ್ನು ತಿರಸ್ಕರಿ­ಸಿದ್ದರು. ಹೀಗಾಗಿ ವರ್ಷಾ ದೇಶಪಾಂಡೆ ಹೈಕೋರ್ಟ್‌ ಮೊರೆ ಹೋಗಿದ್ದರು.ಪ್ರಕರಣಕ್ಕೆ ಸಂಬಂಧಿಸಿ ನೊಟೀಸ್‌ ಜಾರಿ ಮಾಡಿದ ನ್ಯಾಯಾಲಯ ಜ.10­ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಪ್ರತಿಕ್ರಿಯಿಸಿ (+)