ಮಂಗಳವಾರ, ಮಾರ್ಚ್ 2, 2021
29 °C

ಶಾರೂಖ್‌, ಪ್ರಿಯಾಂಕ ಸಾಮಾಜಿಕ ಜಾಲತಾಣದ ‘ರಾಜ’, ‘ರಾಣಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾರೂಖ್‌, ಪ್ರಿಯಾಂಕ ಸಾಮಾಜಿಕ ಜಾಲತಾಣದ ‘ರಾಜ’, ‘ರಾಣಿ’

ಮುಂಬೈ (ಪಿಟಿಐ): ಸಾಮಾಜಿಕ ಜಾಲತಾಣದ ‘ರಾಜ’, ‘ರಾಣಿ’ ಎಂಬ ಕೀರಿಟ ಬಾಲಿವುಡ್‌ ನಟ ಶಾರೂಖ್‌ ಖಾನ್‌ ಮತ್ತು ನಟಿ ಪ್ರಿಯಾಂಕ ಚೋಪ್ರಾ ಅವರ ಮುಡಿಗೇರಿದೆ. ಬಾಲಿವುಡ್‌ ಡಿಜಿಟಲ್‌ ಪೋರ್ಟಲ್‌  ‘ಬಾಲಿವುಡ್‌ ಲೈಫ್‌’ ಈ ಕುರಿತು ಸಮೀಕ್ಷೆ ನಡೆಸಿದ್ದು, ಭಾರತದಾದ್ಯಂತ ಪ್ರೇಕ್ಷಕರು ಹಾಗೂ ರಷ್ಯಾ, ಬ್ರಿಟನ್‌, ಅಮೆರಿಕದಲ್ಲಿನ ಅಭಿಮಾನಿಗಳು ಇದಕ್ಕೆ ಪ್ರತಿಕ್ರಿಯಿಸಿ ಮತ ಚಲಾಯಿಸಿದ್ದಾರೆ. ‘ಹಿಂದೆ ಅಭಿಮಾನಿಗಳಿಗೆ ಧನ್ಯವಾದ ತಿಳಿಸಲು ಮತ್ತು ಅವರೊಟ್ಟಿಗೆ ಸಂವಹನ ನಡೆಸಲು ಕೇವಲ ಪತ್ರಗಳನ್ನು ಬಳಸಲಾಗುತ್ತಿತ್ತು. ಆದರೆ ಸಾಮಾಜಿಕ ಜಾಲತಾಣಗಳು ಅದನ್ನು ಸುಲಭವಾಗಿಸಿವೆ. ಅಂತಹ ಜಾಲತಾಣಗಳ ‘ರಾಜ’ ಎಂಬ ಬಿರುದಿಗೆ ಕಾರಣವಾದ ಜನರಿಗೆ ಮತ್ತು ಬಾಲಿವುಡ್‌ ಲೈಫ್‌ಗೆ ಧನ್ಯವಾದಗಳು’ ಎಂದು ಶಾರೂಖ್‌ ಖಾನ್‌ ತಿಳಿಸಿದ್ದಾರೆ.ಮಾಜಿ ವಿಶ್ವ ಸುಂದರಿ ಪ್ರಿಯಾಂಕ ಚೋಪ್ರಾ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ‘ನಾನು ಸದಾ ರಾಣಿಯಾಗಿರಲು ಬಯಸುತ್ತೇನೆ. ವಿಶ್ವ ಸುಂದರಿ ಪಟ್ಟ ಗೆದ್ದಾಗ ನಾನು ರಾಣಿ ಎಂದೇ ಭಾವಿಸಿದ್ದೆ. ಈಗ ಬಂದಿರುವ ಈ ಬಿರುದು ಮತ್ತೆ ನನಗೆ ರಾಣಿ ಎಂಬ ಭಾವನೆಯನ್ನು ಮೂಡಿಸುತ್ತಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಕೃತಜ್ಞತೆಗಳು’ ಎಂದಿದ್ದಾರೆ.ರಾಜ, ರಾಣಿ ಅಲ್ಲದೆ ಇತರ ಬಿರುದುಗಳನ್ನು ಸಹ ನೀಡಲಾಗಿದ್ದು, ನಟ ವರುಣ್‌ ಧವನ್‌ ಸಾಮಾಜಿಕ ಜಾಲತಾಣದ ‘ಸೆಲ್ಫಿ ರಾಜ’ ಎಂಬ ಬಿರುದು ಪಡೆದಿದ್ದರೆ, ನಟ ಅರ್ಜುನ್‌ ಕಪೂರ್‌ ‘ಪದಾರ್ಪಣೆ’ ಬಿರುದು ಪಡೆದಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.