ಶಾರೂಖ್-ಕಾಜೋಲ್ ಜನಪ್ರಿಯ ಜೋಡಿ

7

ಶಾರೂಖ್-ಕಾಜೋಲ್ ಜನಪ್ರಿಯ ಜೋಡಿ

Published:
Updated:
ಶಾರೂಖ್-ಕಾಜೋಲ್ ಜನಪ್ರಿಯ ಜೋಡಿ

ಲಂಡನ್ (ಪಿಟಿಐ): ಬಾಲಿವುಡ್ ನಟ ಶಾರೂಖ್ ಖಾನ್ ಮತ್ತು ನಟಿ ಕಾಜೋಲ್ ಬಾಲಿವುಡ್ ಸಿನಿಮಾ ಕ್ಷೇತ್ರದ ಅತ್ಯಂತ ಜನಪ್ರಿಯ ಪ್ರಣಯ ಜೋಡಿಗಳು...! ಹೀಗೆಂದು ಲಂಡನ್‌ನ ಸಿನಿಮಾ ಪ್ರಿಯರು ಈ ಜೋಡಿಯ ಪರ `ಮತ' ಚಲಾಯಿಸಿದ್ದಾರೆ.`ದಿಲ್ವಾಲೆ ದುಲ್ಹನಿಯಾ ಲೇ ಜಾಯೆಂಗೆ', `ಕುಚ್ ಕುಚ್ ಹೋತಾ ಹೈ' ಸೇರಿದಂತೆ ಹಲವು ವೈವಿಧ್ಯಮಯ ಪ್ರಣಯ ಚಿತ್ರಗಳಲ್ಲಿ ಯಶಸ್ವಿಯಾಗಿ ನಟಿಸಿರುವ ಈ ಜೋಡಿಯನ್ನೇ ಅತ್ಯಂತ ಜನಪ್ರಿಯ ಪ್ರಣಯ ಜೋಡಿಗಳೆಂದು ಇಲ್ಲಿನ ಬಾಲಿವುಡ್ ಸಿನಿಮಾ ಪ್ರಿಯರು ಆಯ್ಕೆ ಮಾಡಿದ್ದಾರೆ.ಬ್ರಿಟನ್‌ನ ಆನ್‌ಲೈನ್ ಪೋರ್ಟೆಲ್ `ಪೇ - ಪರ್ - ವ್ಯೆವ್ ಇಂಡಿಯನ್ ಮೂವಿ ಪೋರ್ಟೆಲ್'ನ ಸನೋನಾ ಅವರು ಈ ಸ್ಪರ್ಧೆಯನ್ನು ಆಯೋಜಿಸಿದ್ದರು.

ಜನಪ್ರಿಯ ಪ್ರಣಯ ಜೋಡಿಗಳನ್ನು ಆಯ್ಕೆ ಮಾಡುವುದು ಈ ಸ್ಪರ್ಧೆಯ ಉದ್ದೇಶ. ಆದರೆ ಶಾರೂಖ್ ಮತ್ತು ಕಾಜೋಲ್ ಜೋಡಿ, ದಶಕಗಳ ಹಿಂದಿನ ಧರ್ಮೇಂದ್ರ - ಹೇಮಮಾಲಿನಿ, ರಾಜ್‌ಕಪೂರ್-ನರ್ಗೀಸ್, ಅಮಿತಾಭ್- ರೇಖಾ ಜೋಡಿಗಳ ಜನಪ್ರಿಯತೆಯನ್ನು ಹಿಂದಿಕ್ಕಿದೆ.ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್ ಮತ್ತು ಟ್ವಿಟರ್, ಇಮೇಲ್ ಮತ್ತು ಸಿನಿಮಾ ಪೋರ್ಟೆಲ್ ಮೂಲಕ ವಿಶ್ವದ ಯಾವುದೇ ಭಾಗದಿಂದ ಮತ ಹಾಕಲು ವ್ಯವಸ್ಥೆ ಮಾಡಲಾಗಿತ್ತು. ಕಾಕತಾಳೀಯವೆಂಬಂತೆ ಈ ಸ್ಪರ್ಧೆಯ ಫಲಿತಾಂಶ ಪ್ರೇಮಿಗಳ ದಿನದಂದು ಪ್ರಕಟವಾಗಿರುವುದು, ಬಾಲಿವುಡ್ ಸಿನಿಮಾ ಪ್ರೇಮಿಗಳಲ್ಲಿ ಒಂದು ರೀತಿ ಪುಳಕ ಉಂಟು ಮಾಡಿದೆ.ದೇಶದ ವಿವಿಧ ಭಾಗಗಳಲ್ಲಿರುವ ಬಾಲಿವುಡ್ ಸಿನಿಮಾ ಪ್ರೇಮಿಗಳು ಶಾರೂಖ್-ಕಾಜೋಲ್ ಜೋಡಿಯನ್ನು `ನಂ. 1' ಪ್ರಣಯದ ಜೋಡಿಗಳೆಂದು ಆಯ್ಕೆ ಮಾಡಿದ್ದಾರೆ. `95ರ ದಿಲ್‌ವಾಲೆ ದುಲ್ಹನಿಯಾ....' ಸಿನಿಮಾದಲ್ಲಿ ಈ ಜೋಡಿಯ ನಟನೆಯನ್ನು ನೋಡಿ, ಇವರು ಪ್ರಣಯದ ಐಕಾನ್ ಎಂದು ತೀರ್ಮಾನಿಸಿ, ಮತ ಹಾಕಿದ್ದೇವೆಂದು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry