ಶಾರ್ಕ್‌ಗೆ ಆಹಾರವಾಗುತ್ತಿದ್ದವರ ರಕ್ಷಣೆ

ಸೋಮವಾರ, ಮೇ 20, 2019
30 °C

ಶಾರ್ಕ್‌ಗೆ ಆಹಾರವಾಗುತ್ತಿದ್ದವರ ರಕ್ಷಣೆ

Published:
Updated:

ಮೆಲ್ಬರ್ನ್ (ಪಿಟಿಐ): ಸಾವು ಗೆದ್ದವರು ಎಂದರೆ ಇಂಥವರನ್ನೇ ನೋಡಿ ಹೇಳಿರಬೇಕು. ಆಸ್ಟ್ರೇಲಿಯದ ಪರ್ತ್ ಸಮೀಪದ ಸಮುದ್ರದಲ್ಲಿ ಶುಕ್ರವಾರ ಸಾವಿನ ದವಡೆಯಲ್ಲಿದ್ದವರನ್ನು ರಕ್ಷಿಸಲಾಗಿದೆ. ಬೃಹತ್ ಹ್ಯಾಮರ್‌ಹೆಡೆಡ್ ಶಾರ್ಕ್ ಮೀನುಗಳು ಸುತ್ತುವರೆದು ಇನ್ನೇನು ಅವುಗಳಿಗೆ ಆಹಾರವಾಗಲಿದ್ದ ಇಬ್ಬರನ್ನು ಆಶ್ವರ್ಯಕರ ರೀತಿಯಲ್ಲಿ ರಕ್ಷಿಸಲಾಗಿದೆ.ಲೀಮನ್ ಪಟ್ಟಣದ ಈ ಮೂವರು ಸಮುದ್ರದಲ್ಲಿ ಮೀನು ಹಿಡಿಯಲು ತೆರಳಿದ್ದು, ನಂತರ ಕಣ್ಮರೆಯಾಗಿದ್ದರು. ಮಾಹಿತಿ ಪಡೆದ ಕಡಲು ಕಾವಲು ಪಡೆ ಹಾಗೂ ರಕ್ಷಣಾ ಕಾರ್ಯಕರ್ತರು ಯಂತ್ರಚಾಲಿತ ಬೋಟ್ ಮತ್ತು ಹೆಲಿಕಾಪ್ಟರ್‌ಗಳ ನೆರವಿನೊಂದಿಗೆ ಪತ್ತೆ ಕಾರ್ಯಕ್ಕೆ ಮುಂದಾದರು.ಇದೇ ಸಂದರ್ಭದಲ್ಲಿ `ಚಾನೆಲ್-7~ ಟೆಲಿವಿಷನ್‌ನ ಹೆಲಿಕಾಪ್ಟರ್ ಸಿಬ್ಬಂದಿ ಇಬ್ಬರು ಸಮುದ್ರದಲ್ಲಿ ಇರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು. ಕಡಲು ಕಾವಲು ಪಡೆಯ ಹೆಲಿಕಾಪ್ಟರ್‌ಗಳು ಸ್ಥಳಕ್ಕೆ ಧಾವಿಸಿದಾಗ ಅಚ್ಚರಿ ಹಾಗೂ ಭಯಂಕರ ದೃಶ್ಯ ಎದುರಾಯಿತು.ಇಬ್ಬರ ಸುತ್ತಲು ಸುಮಾರು ಇಪ್ಪತ್ತು ಮೀಟರ್ ಅಂತರದಲ್ಲಿ ಹ್ಯಾಮರ್‌ಹೆಡೆಡ್ ಶಾರ್ಕ್ ಮೀನುಗಳು ಹೊಂಚುಹಾಕಿ ತಿನ್ನಲು ದಾಳಿ ನಡೆಸುತ್ತಿದ್ದವು. ರಕ್ಷಣಾ ಕಾರ್ಯಕರ್ತರು ಅಗಲವಾದ ರಬ್ಬರ್ ಹಲಗೆಗಳನ್ನು ನೀರಿಗೆ ಎಸೆದು ಅಪಾಯದಲ್ಲಿದ್ದವರಿಗೆ ನೆರವು ನೀಡಿ ಇಬ್ಬರನ್ನೂ ರಕ್ಷಿಸಿ ದಡಕ್ಕೆ ತರಲಾಯಿತು.ತೀವ್ರವಾಗಿ ಗಾಯಗೊಂಡಿದ್ದ ಒಬ್ಬ ವ್ಯಕ್ತಿ ಮೃತಪಟ್ಟ. ಇನ್ನೊಬ್ಬ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತು. ಇನ್ನೊಬ್ಬ ವ್ಯಕ್ತಿ ಕಣ್ಮರೆಯಾಗಿದ್ದು, ಶಾರ್ಕ್‌ಗಳಿಗೆ ಅಹಾರವಾಗಿರಬಹುದು ಎಂದು ಶಂಕಿಸಲಾಗಿದೆ.ಸ್ಥಳದಲ್ಲೇ ಇದ್ದ `ಚಾನೆಲ್-7~ರ ವರದಿಗಾರರು ಈ ದೃಶ್ಯಾವಳಿಗಳನ್ನು ನೇರವಾಗಿ ಸೆರೆ ಹಿಡಿದು ಬಿತ್ತರಿಸಿದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry