ಶಾರ್ಟ್ ಪಿಚ್ ಎಸೆತ ಎದುರಿಸುವುದು ಕಷ್ಟವಾಗಿಲ್ಲ: ರೈನಾ

ಶುಕ್ರವಾರ, ಜೂಲೈ 19, 2019
26 °C

ಶಾರ್ಟ್ ಪಿಚ್ ಎಸೆತ ಎದುರಿಸುವುದು ಕಷ್ಟವಾಗಿಲ್ಲ: ರೈನಾ

Published:
Updated:

ಕಿಂಗ್‌ಸ್ಟನ್, ಜಮೈಕಾ (ಪಿಟಿಐ): `ಶಾರ್ಟ್ ಪಿಚ್~ ಎಸೆತಗಳನ್ನು ಎದುರಿಸುವುದು ಈಗ ಕಷ್ಟ ಎನಿಸುತ್ತಿಲ್ಲ. ಇಂಥ ಬೌಲಿಂಗ್ ದಾಳಿಯನ್ನು ಸಮರ್ಥವಾಗಿ ನಿಭಾಯಿಸತೊಡಗಿದ್ದೇನೆ ಎಂದು ಭಾರತ ತಂಡದ ಯುವ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.ವೆಸ್ಟ್ ಇಂಡೀಸ್ ವಿರುದ್ಧ ತಂಡವು ತೀರ ಸಾಧಾರಣ ಮೊತ್ತಕ್ಕೆ ಕುಸಿಯುವ ಅಪಾಯ ಇದ್ದಾಗ ತಮ್ಮ ತಂಡಕ್ಕೆ ಆಸರೆಯಾಗಿ ನಿಂತು ಇನಿಂಗ್ಸ್ ಕಟ್ಟಿದ ರೈನಾ ಮೊದಲ ಇನಿಂಗ್ಸ್‌ನಲ್ಲಿ 82 (115 ಎ., 15 ಬೌಂಡರಿ) ರನ್ ಗಳಿಸಿದರು.`ವಿಂಡೀಸ್ ವೇಗಿಗಳು ನಾನು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದಂಥ ಪರಿಸ್ಥಿತಿ ನಿರ್ಮಾಣ ಮಾಡಲು ಸಾಕಷ್ಟು ಪ್ರಯತ್ನ ಮಾಡಿದರು. ಆದರೂ ನಾನು ಎದೆಗುಂದಲಿಲ್ಲ~ ಎಂದು ತಿಳಿಸಿದರು.`ಹೆಚ್ಚಿನ ಎಸೆತಗಳನ್ನು ನೇರವಾಗಿ ಆಡುವುದು ನನ್ನ ಪ್ರಯತ್ನವಾಗಿತ್ತು. ನನ್ನ ಉದ್ದೇಶಕ್ಕೆ ತಕ್ಕ ರೀತಿಯಲ್ಲಿ ಬ್ಯಾಟಿಂಗ್ ಮಾಡಲು ಮನಸ್ಸು ಶಾಂತವಾಗಿ ಇರುವಂತೆ ಎಚ್ಚರವಹಿಸಿ~ ಎಂದರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry