ಶಾರ್ಟ್ ಸರ್ಕಿಟ್: ಬಸ್‌ಗೆ ಬೆಂಕಿ

7

ಶಾರ್ಟ್ ಸರ್ಕಿಟ್: ಬಸ್‌ಗೆ ಬೆಂಕಿ

Published:
Updated:
ಶಾರ್ಟ್ ಸರ್ಕಿಟ್: ಬಸ್‌ಗೆ ಬೆಂಕಿ

ಬೆಂಗಳೂರು: ಶಾರ್ಟ್ ಸರ್ಕಿಟ್‌ನಿಂದ ಬೆಂಕಿ ಹೊತ್ತಿಕೊಂಡು ಬಸ್ ಸಂಪೂರ್ಣ ಸುಟ್ಟು ಹೋದ ಘಟನೆ ನಗರದ ಶಾಂತಿನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದೆ.ಬೀದರ್‌ನ ಬಾಲ್ಕಿ ಡಿಪೋದ ರಾಜಹಂಸ ಬಸ್ ಗುರುವಾರ ಬೆಳಿಗ್ಗೆ ನಗರಕ್ಕೆ ಬಂದಿತ್ತು. ಸಂಜೆ 6.45ಕ್ಕೆ ಮತ್ತೆ ಬೀದರ್‌ಗೆ ತೆರಳಬೇಕಾದ್ದರಿಂದ ಶಾಂತಿನಗರದ ಬಳಿ ಬಸ್ ನಿಲ್ಲಿಸಿ ಚಾಲಕರಾದ ಅಶೋಕ್, ಸಂಜೀವ್ ಹಾಗೂ ನಿರ್ವಾಹಕ ಮಾರುತಿ ಬಸ್‌ನಲ್ಲಿಯೇ ಮಲಗಿದ್ದರು. ಮಧ್ಯಾಹ್ನ 2.45ರ ಸುಮಾರಿಗೆ ಎಂಜಿನ್‌ನಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಬೆಂಕಿ ಹೊತ್ತಿಕೊಂಡಿದೆ ಎಂದು ಪೊಲೀಸರು ತಿಳಿಸಿದರು.ಬೆಂಕಿಯ ತೀವ್ರತೆ ಹೆಚ್ಚಾಗಿ ಇಡೀ ಬಸ್ ಹೊತ್ತಿ ಉರಿಯಲು ಆರಂಭಿಸಿತು. ಬಸ್‌ನಲ್ಲಿ ಮಲಗಿದ್ದ ಮೂರು ಮಂದಿಯನ್ನು ಸಾರ್ವಜನಿಕರು ಎಚ್ಚರಿಸಿ ಪ್ರಾಣಪಾಯದಿಂದ ಪಾರು ಮಾಡಿದ್ದಾರೆ. ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry