ಶಾರ್ಟ್ ಸರ್ಕಿಟ್: ಶಾಮಿಯಾನಕ್ಕೆ ಬೆಂಕಿ

7

ಶಾರ್ಟ್ ಸರ್ಕಿಟ್: ಶಾಮಿಯಾನಕ್ಕೆ ಬೆಂಕಿ

Published:
Updated:

ಬೆಂಗಳೂರು: ಶಾಲಾ ಕಾರ್ಯಕ್ರಮ ನಡೆಯುತ್ತಿದ್ದ ವೇಳೆ ವಿದ್ಯುತ್ ಶಾರ್ಟ್ ಸರ್ಕಿಟ್‌ನಿಂದಾಗಿ ಶಾಮಿಯಾನಕ್ಕೆ ಬೆಂಕಿ ಹೊತ್ತಿಕೊಂಡ ಘಟನೆ ವಿವೇಕನಗರ ಸಮೀಪ ಶನಿವಾರ ರಾತ್ರಿ ಸಂಭವಿಸಿದೆ.`ಅಶೋಕನಗರದ ಬ್ರೈಟ್ ಶಾಲೆಯ ವತಿಯಿಂದ ವಿವೇಕನಗರ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಎಬಿಸಿ ಮೈದಾನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಮಕ್ಕಳು ಹಾಗೂ ಶಿಕ್ಷಕರು ಸೇರಿದಂತೆ ಸುಮಾರು 600ಕ್ಕೂ ಹೆಚ್ಚು ಜನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾತ್ರಿ 10 ಗಂಟೆ ಸುಮಾರಿಗೆ ಜನರೇಟರ್‌ನಲ್ಲಿ ಶಾರ್ಟ್ ಸರ್ಕಿಟ್ ಉಂಟಾಗಿ ಶಾಮಿಯಾನಕ್ಕೆ ಬೆಂಕಿ ಹೊಂತ್ತಿಕೊಂಡಿದೆ~ ಎಂದು ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry