ಭಾನುವಾರ, ಮೇ 22, 2022
26 °C

ಶಾರ್ಟ್ ಸರ್ಕೀಟ್: ಆರು ಗುಡಿಸಲು ಭಸ್ಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗೇಪಲ್ಲಿ: ವಿದ್ಯುತ್ ಶಾರ್ಟ್ ಸರ್ಕೀಟ್‌ನಿಂದ ಆರು ಗುಡಿಸಲುಗಳು ಭಸ್ಮವಾದ ಘಟನೆ ತಾಲ್ಲೂಕಿನ ಪೋಲನಾಯಕನಪಲ್ಲಿ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ.ಗ್ರಾಮದ ವಿದ್ಯುತ್ ಕಂಬದಲ್ಲಿ ಉಂಟಾದ ಶಾರ್ಟ್ ಸರ್ಕೀಟ್‌ನಿಂದ ಗುಡಿಸಲಿನಲ್ಲಿದ್ದ ದವಸ-ಧಾನ್ಯಗಳು, ಕೋಳಿಗಳು ದಹನವಾಗಿವೆ. ಅದೃಷ್ಟ ವಶಾತ್ ಘಟನೆಯಲ್ಲಿ ಯಾರಿಗೂ ಅಪಘಾತ ವಾಗಿಲ್ಲ. ಮಂಜುನಾಥ, ಶ್ರೀರಾಮ, ನಾರಾ ಯಣ ಪ್ಪ, ಈರಪ್ಪ, ಸುಬ್ಬುಲಕ್ಷ್ಮೀ, ಉಸೇನ್‌ಭೀ ಎಂಬು ವವರ ಗುಡಿಸಲು ಮನೆಗಳು ಸುಟ್ಟು ಭಸ್ಮ ಆಗಿವೆ.ಘಟನೆಯಲ್ಲಿ ಕೋಳಿಗಳು ದಹನವಾಗಿವೆ. ಸುಮಾರು ರೂ.15 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಚೇಳೂರು ಸಬ್ ಇನ್ಸ್‌ಪೆಕ್ಟರ್ ಭೇಟಿ ನೀಡಿ ಪರಿಶೀಲಿಸಿದರು.

ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಲು ಹರಸಾಹಸ ಮಾಡಿದರು.ಬದುಕು ಬೀದಿ ಪಾಲು:
ಮನೆಯಲ್ಲಿದ್ದ ಪಗಡೆ, ಪಾತ್ರೆಗಳು, ದವಸ ಧಾನ್ಯಗಳು ಭಸ್ಮವಾದ ಹಿನ್ನೆಲೆಯಲ್ಲಿ ಇಲ್ಲಿ ವಾಸ ಮಾಡುತ್ತಿದ್ದ ವಾಸಿಗಳ ಬದುಕು ಅತಂತ್ರವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶೋಭಾರಾಣಿ `ಬೆಂಕಿಗೆ ಆಹುತಿಯಾದ ಕುಟುಂಬಗಳಿಗೆ ತಾತ್ಕಾಲಿಕ ಸಿಮೆಂಟ್ ಶೀಟ್‌ಗಳನ್ನು ವಿತರಿಸಲಾಗುವುದು. ಸರ್ಕಾರದಿಂದ ಮನೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು.ಘಟನಾ ಸ್ಥಳಕ್ಕೆ ತಹಸೀಲ್ದಾರ್ ಟಿ.ಎ.ಹನುಮಂತರಾಯ, ತಾಲ್ಲೂಕು ಪಂಚಾಯತಿ ಕಾರ್ಯ ನಿರ್ವಹಣಾಧಿಕಾರಿ ಸಿ.ಎಸ್.ಜಯರಾಂ, ಸದಸ್ಯರಾದ ಬೂರುಗಮಡುಗು ಲಕ್ಷ್ಮೀನರಸಿಂಹಪ್ಪ, ಮುನಿರತ್ನಮ್ಮ, ಜೂಲಪಾಳ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಮಾದೇವಿ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.