ಸೋಮವಾರ, ಜೂನ್ 14, 2021
22 °C
ಪ್ರಜಾವಾಣಿ ವಾರ್ತೆ

ಶಾಲಾ ಕಟ್ಟಡದಿಂದ ಬಿದ್ದು ವಿದ್ಯಾರ್ಥಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಶ್ರೀನಗರ ಸಮೀಪದ ಕಾಳಿದಾಸಲೇಔಟ್‌­ನಲ್ಲಿರುವ ಎವರ್‌ ಶೈನ್‌ ಶಾಲೆಯ ಕಟ್ಟಡದ ಮೊದಲನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಹನುಮಂತನಗರದ ಸರೋಜಮ್ಮ ಎಂಬುವರ ಪುತ್ರ ವಿಜಯ್‌ (13) ಮೃತಪಟ್ಟವನು.ಎಂಟನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಆತ, ಟ್ಯೂಷನ್‌ ಮುಗಿಸಿಕೊಂಡು 7.30ರ ಸುಮಾರಿಗೆ ಮನೆಗೆ ಬಂದಿದ್ದಾನೆ. ನಂತರ ಸ್ನೇಹಿತನ ಮನೆಗೆ ತೆರಳಿ ಪುಸ್ತಕ ಪಡೆದುಕೊಂಡು ಬರುವುದಾಗಿ ತಾಯಿ ಬಳಿ ಹೇಳಿ ಮನೆಯಿಂದ ಹೊರಟಿದ್ದಾನೆ ಎಂದು ಪೊಲೀಸರು ಹೇಳಿದರು.ಸ್ನೇಹಿತನ ಮನೆಗೆ ಹೋಗದೆ ಶಾಲಾ ಆವರಣಕ್ಕೆ ಬಂದಿರುವ ವಿಜಯ್‌, ಕಟ್ಟಡದ ಮೊದಲ ಮಹಡಿಗೆ ತೆರಳಿದ್ದಾನೆ. ನಂತರ ಸೊಂಟಕ್ಕೆ ಹಗ್ಗ ಕಟ್ಟಿಕೊಂಡು ಜಿಗಿಯಲು ಯತ್ನಿಸಿದ್ದಾನೆ. ಈ ಹಂತದಲ್ಲಿ ಹಗ್ಗ ತುಂಡಾಗಿದ್ದರಿಂದ ತಲೆ ಕೆಳಗಾಗಿ ಬಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರತ್ಯಕ್ಷದರ್ಶಿಗಳು ನೀಡಿದ ಹೇಳಿಕೆ ಆಧರಿಸಿ ತನಿಖೆ ನಡೆಸಲಾಗುತ್ತಿದೆ. ಆತ ಏಕೆ ಹಗ್ಗ ಕಟ್ಟಿಕೊಂಡು ಜಿಗಿಯಲು ಯತ್ನಿಸಿದ ಎಂಬುದು ಗೊತ್ತಿಲ್ಲ. ಈ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಮೃತನ ತಾಯಿಯ ವಿಚಾರಣೆ ನಡೆಸಿ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಹನುಮಂತನಗರ ಪೊಲೀಸರು ಹೇಳಿದ್ದಾರೆ. ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.