ಶುಕ್ರವಾರ, ಜೂನ್ 25, 2021
22 °C

ಶಾಲಾ ಕೊಠಡಿ ಕಾಮಗಾರಿ ಕಳಪೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಟ್ಟಿ ಚಿನ್ನದ ಗಣಿ: ಸ್ಥಳೀಯ ಹಟ್ಟಿ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ(ಎಸ್‌ಎಸ್‌ಎ) ಯೋಜನೆ ಅಡಿಯಲ್ಲಿ ನಿರ್ಮಿಸಿದ ಶಾಲಾ ಕೊಠಡಿ ಕಾಮಗಾರಿ ಕಳಪೆ ಯಾಗಿದೆ. ಬಿರುಕು ಕಾಣಿಸಿಕೊಂಡಿದೆ ಎಂದು ಗ್ರಾಮ ಪಂಚಾಯಿತಿ ಸದಸ್ಯರು ಮಂಗಳವಾರ ಪರಿಶೀಲನೆ ನಡೆಸಿ ಅಸಮಾಧಾನ ವ್ಯಕ್ತಪಡಿಸಿದರು.ಯೋಜನೆ ಪ್ರಕಾರ ಕೊಠಡಿಯ ಫ್ಲೋರಿಂಗ್‌ಗೆ ಪಾಲಿಶ್ ಮಾಡಿದ ಬಂಡೆ ಹಾಕಬೇಕು. ಆದರೆ ಬದಲಾಗಿ ಕಾಂಕ್ರಿಟ್ ಫ್ಲೋರಿಂಗ್ ಮಾಡಲಾಗಿದೆ. ಎಸ್‌ಎಸ್‌ಎ ಯೋಜನೆಯ ನಿಯಮದಂತೆ ಎಸ್‌ಡಿಎಂಸಿ ಸಮಿತಿ ಉಸ್ತುವಾರಿಯಲ್ಲಿ ಕೊಠಡಿ ನಿರ್ಮಾಣ ಕಾರ್ಯ ನಡೆಯಬೇಕು. ಆದರೆ ಈ ನಿಯಮ ಪಾಲಿಸಿಲ್ಲ. ಹಳೆಯ ಕೊಠಡಿಗಳಿಗೆ ಹೊರಗೆ ಬಣ್ಣ ಹಚ್ಚಲಾಗಿದೆ ಒಳಗೆ ಕಸದ ರಾಶಿ ಬಿದ್ದಿದೆ.

 

ಶಾಲೆಯ ಆಡಳಿತ ಸ್ವಚ್ಛತೆಕಡೆ ಗಮನ ಹರಿಸಿಲ್ಲ. ಎಸ್‌ಡಿಎಂಸಿ ಸಮಿತಿ ರಚಿಸುವ ಕುರಿತು ಕ್ರಮಜರುಗಿಸುತ್ತಿಲ್ಲ. ಗ್ರಾಮ ಪಂಚಾಯಿತಿ  ಸದಸ್ಯರನ್ನು ಕಡೆಗಣಿಸಲಾಗಿದೆ ಎಂದು ಸದಸ್ಯರಾದ ಶ್ರೀನಿವಾಸ, ಬಂದೆನವಾಜ್, ಶಂಕರಗೌಡ, ಅಂಜನಮ್ಮ, ಬಾಬಾ ಬುಡನ್, ಅಂಜನಮ್ಮ, ಸಂಜೀವ ಕುಮಾರ್, ಶಾರದಾ ಪಾಟೀಲ್, ವಾಜೀದ್ ಹುಸೇನ್ ಮತ್ತಿತರರು ಆರೋಪಿಸಿದರು.ಇನ್ನೂ ಮುಂದೆ ಎಸ್‌ಡಿಎಂಸಿ ರಚಿಸದೆ ಯಾವುದೇ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಾರದೆಂದು ಒತ್ತಾಯಿಸಲಾಯಿತು. ಈ ಸಂಬಂಧ ಶಿಕ್ಷಕರ ಮತ್ತು ಗ್ರಾಮ ಪಂಚಾಯಿತಿ ಸದಸ್ಯರ ನಡುವೆ ವಾಗ್ವಾದ ನಡೆಯಿತು. ಶಿಕ್ಷಕರು ಸರಿಯಾದ ಸಮಯಕ್ಕೆ ಶಾಲೆಗೆ ಬರುವುದಿಲ್ಲ.  ಮನ ಬಂದಂತೆ ನಡೆದು ಕೊಳ್ಳುತ್ತಾರೆ. ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಶೌಚಾಲಯ ಇಲ್ಲ ಎಂದು ನೆರೆದಿದ್ದ ಸಾರ್ವಜನಿಕರು ಧ್ವನಿಗೂಡಿಸಿದರು. ತನಿಖೆಗೆ ಉನ್ನತಾಧಿಕಾರಿಗಳಿಗೆ ದೂರು ಸಲ್ಲಿಸುವುದಾಗಿ ಸದಸ್ಯರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.