ಬುಧವಾರ, ಏಪ್ರಿಲ್ 14, 2021
32 °C

ಶಾಲಾ ಕ್ರಿಕೆಟ್: ಮೈಸೂರು, ಬೆಳಗಾವಿ ತಂಡಗಳಿಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಸಾಗರ ಅವರ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಲೋಕೇಶ ಅವರ ಪರಿಣಾಮಕಾರಿ ಬೌಲಿಂಗ್ (15ಕ್ಕೆ4) ನೆರವಿನಿಂದ ಮೈಸೂರು ತಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ 14 ವರ್ಷ ಯೋಮಿತಿಯೊಳಗಿನವರ ಶಾಲಾ ಕ್ರಿಕೆಟ್ ಟೂರ್ನಿಯ ಗುರುವಾರದ ಪಂದ್ಯದಲ್ಲಿ  ಭರ್ಜರಿ ಜಯ ಸಾಧಿಸಿತು.ನಗರದ ಮಾಲಾದೇವಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಅದು ಗುಲ್ಬರ್ಗ ತಂಡವನ್ನು 59 ರನ್‌ಗಳಿಂದ ಮಣಿಸಿತು. ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ತಂಡ ಬೆಂಗಳೂರು ತಂಡದ ವಿರುದ್ಧ ಏಳು ವಿಕೆಟ್‌ಗಳ ಜಯ ಪಡೆಯಿತು.ಸಂಕ್ಷಿಪ್ತ ಸ್ಕೋರ್: ಮೈಸೂರು ತಂಡ: 20 ಓವರ್‌ಗಳಲ್ಲಿ ಐದು ವಿಕೆಟ್‌ಗಳಿಗೆ 195 (ಸಾಗರ 83, ಧೀಮಂತ 49, ಎಂ. ವಾಣೀಶ 20; ರವಿ 28ಕ್ಕೆ1); ಗುಲ್ಬರ್ಗ ತಂಡ: 18 ಓವರ್‌ಗಳಲ್ಲಿ 136ಕ್ಕೆ ಆಲೌಟ್ (ನಾಗೇಶ 65, ಶಿವಸಾಗರ 15;  ಲೋಕೇಶ 15ಕ್ಕೆ 4, ಧನುಷ್ 13ಕ್ಕೆ2).ಬೆಂಗಳೂರು ತಂಡ: 20 ಓವರ್‌ಗಳಲ್ಲಿ ಒಂಬತ್ತು ವಿಕೆಟ್‌ಗಳಿಗೆ 86 (ಪ್ರಜ್ಞಲ್ 18, ಸಂಕಲ್ಪ 16; ಪ್ರಶಾಂತ 11ಕ್ಕೆ3, ಯಶ್ ಪವಾರ 10ಕ್ಕೆ2); ಬೆಳಗಾವಿ ತಂಡ: 13 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 90 (ಅಮಯ್ 46, ಶಿವಂ 17; ಮಹಾಂತೇಶ 22ಕ್ಕೆ1).

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.