ಶುಕ್ರವಾರ, ಏಪ್ರಿಲ್ 23, 2021
31 °C

ಶಾಲಾ ಟಿಟಿ: ಮೈಸೂರು ತಂಡಗಳಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಆತಿಥೇಯ ಮೈಸೂರಿನ 17 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರ ತಂಡಗಳು ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಶಾಲಾ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡವು.ಕಾವೇರಿ ಶಾಲೆಯಲ್ಲಿ ನಡೆದ ಬಾಲಕರ ಫೈನಲ್ ಪಂದ್ಯದಲ್ಲಿ ಮೈಸೂರು ತಂಡವು 3-2ರಿಂದ ಬೆಂಗಳೂರು ದಕ್ಷಿಣ ತಂಡವನ್ನು ಸೋಲಿಸಿತು. ಈ ವಿಭಾಗದ ಪಂದ್ಯಗಳಲ್ಲಿ ಮೈಸೂರಿನ ವೇದಾಂತ್ ಅರಸ್ 11-6, 9-11, 11-6, 11-8ರಿಂದ ಬೆಂಗಳೂರು ದಕ್ಷಿಣದ ಸಮ್ರತ್ ವಿರುದ್ಧ ಜಯ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ವೇದಾಂತ್ 11-13, 11-8, 7-11, 11-5, 11-6ರಿಂದ ಕೇಶವರಾಜ್ ವಿರುದ್ಧ ಗೆದ್ದರು. ಇನ್ನೊಂದು ಪಂದ್ಯದಲ್ಲಿ ಲೌಕಿಕ್ 14-12, 11-3, 11-3ರಿಂದ ಸಮ್ರತ್ ವಿರುದ್ಧ ಗೆದ್ದರು. ಇನ್ನುಳಿದ ಎರಡು ಪಂದ್ಯಗಳಲ್ಲಿ ಬೆಂಗಳೂರು ದಕ್ಷಿಣದ ಕೇಶವರಾಜ್ 11-8, 11-7, 11-7ರಿಂದ ಲೌಕಿಕ್ ವಿರುದ್ಧ; ರಾಹುಲ್ 11-4, 11-3, 11-5ರಿಂದ ಶ್ರೀನಿವಾಸ್ ವಿರುದ್ಧ ಜಯಿಸಿದರು.ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಧಾರವಾಡ ತಂಡವು 3-1ರಿಂದ ಉಡುಪಿ ತಂಡವನ್ನು ಸೋಲಿಸಿತು.

ಬಾಲಕಿಯರ ಫೈನಲ್‌ನಲ್ಲಿ ಮೈಸೂರು ತಂಡವು 3-1ರಿಂದ ಬೆಂಗಳೂರು ದಕ್ಷಿಣ ತಂಡದ ವಿರುದ್ಧ ಜಯಿಸಿ ಪ್ರಶಸ್ತಿ ಗಳಿಸಿತು.ಈ ವಿಭಾಗದ ಪಂದ್ಯಗಳಲ್ಲಿ ಮೈಸೂರಿನ ರಿಧಿ ರೋಹಿತ್ 11-9, 10-12, 13-11, 11-5ರಿಂದ ಬೆಂಗಳೂರಿನ ಪ್ರಿಯಾ ರಾವ್ ವಿರುದ್ಧ ಗೆದ್ದರು. ಇನ್ನೊಂದರಲ್ಲಿ ರಿಧಿ ರೋಹಿತ್ 6-11, 11-4, 4-11, 11-7, 11-3ರಿಂದ ರಕ್ಷಾ ವಿರುದ್ಧ ಜಯಿಸಿದರು. ಇನ್ನೊಂದು ಪಂದ್ಯದಲ್ಲಿ ಎಂ.ವಿ. ಸ್ಫೂರ್ತಿ 12-10, 11-6, 11-3ರಿಂದ ಬೆಂಗಳೂರಿನ ರಕ್ಷಾ ವಿರುದ್ಧ ವಿಜಯಿಯಾದರು. ಇನ್ನೊಂದು ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರಿನ ಗೀತಾ 9-11, 2-11, 5-11ರಿಂದ ಮೈಸೂರಿನ ವಿನಿತಾ ಅವರನ್ನು ಪರಾಭವಗೊಳಿಸಿದರು.ಬೆಂಗಳೂರು, ಬೆಳಗಾವಿಗೆ ಜಯ: 14 ವರ್ಷದೊಳಗಿನವರ ವಿಭಾಗದಲ್ಲಿ ಬೆಂಗಳೂರು ದಕ್ಷಿಣ ಬಾಲಕರ ತಂಡ ಮತ್ತು ಬೆಳಗಾವಿ ಜಿಲ್ಲಾ ಬಾಲಕಿಯರ ತಂಡಗಳು ಪ್ರಶಸ್ತಿ ಗಳಿಸಿದವು. ಬಾಲಕರ ವಿಭಾಗದ ಫೈನಲ್‌ನಲ್ಲಿ ಬೆಂಗಳೂರು 3-0ಯಿಂದ ಧಾರವಾಡ ಜಿಲ್ಲೆ ವಿರುದ್ಧ ಸುಲಭ ಜಯ ಸಾಧಿಸಿತು. ಬಾಲಕಿಯರ ವಿಭಾಗದಲ್ಲಿ ಬೆಳಗಾವಿ ತಂಡವು  3-1ರಿಂದ ಬೆಂಗಳೂರು ನಗರದ ವಿರುದ್ಧ ಜಯಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.