ಶನಿವಾರ, ಅಕ್ಟೋಬರ್ 19, 2019
27 °C

ಶಾಲಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್: ಬಾಸೆಲ್ ಮಿಷನ್ ಶುಭಾರಂಭ

Published:
Updated:

ಧಾರವಾಡ: ನಗರದ ಬಾಸೆಲ್ ಮಿಷನ್ ಇಂಗ್ಲಿಷ್ ಮಾಧ್ಯಮ ಶಾಲಾ ತಂಡ ಗುರುವಾರ ಇಲ್ಲಿಯ ರೋವರ್ಸ್‌ ಕ್ಲಬ್ ಅಂಕಣದಲ್ಲಿ ಆರಂಭವಾದ ರಾಜ್ಯಮಟ್ಟದ `ರೋವರ್ಸ್‌ ಕಪ್~ ಶಾಲಾ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ 40-32 (12-9)ರಿಂದ ಬೆಂಗಳೂರಿನ ಬಲಾಢ್ಯ ವಿದ್ಯಾನಗರ ಶಾಲಾ ತಂಡವನ್ನು ಪರಾಭವಗೊಳಿಸುವ ಮೂಲಕ ಅಚ್ಚರಿ ಮೂಡಿಸಿತು.ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಮಂಗಳೂರಿನ ಶಾರದಾ ವಿದ್ಯಾಲಯ ತಂಡ 47-11 (10-3)ರಿಂದ ಧಾರವಾಡದ ಕೆ.ಇ. ಬೋರ್ಡ್ಸ್ ಶಾಲಾ ತಂಡವನ್ನು; ಧಾರವಾಡದ ಪವನ್ ಇಂಗ್ಲಿಷ್ ಮಾಧ್ಯಮ ಶಾಲಾ ತಂಡ 40-13 (12-2)ರಿಂದ ಬಳ್ಳಾರಿ ನಂದಿ ಇಂಗ್ಲಿಷ್ ಮಾಧ್ಯಮ ಶಾಲಾ ತಂಡವನ್ನು;  ಹುಬ್ಬಳ್ಳಿಯ ಸೇಂಟ್ ಮೈಕೆಲ್ಸ್ ಶಾಲಾ ತಂಡ 32-22 (10-4)ರಿಂದ ಉಡುಪಿಯ ಲಿಟಲ್ ರಾಕ್ ಇಂಡಿಯನ್ ಶಾಲಾ ತಂಡವನ್ನು; ಚಂದರಗಿಯ ಕ್ರೀಡಾ ಶಾಲಾ ತಂಡ 37-19 (0-13)ರಿಂದ ಕೆ.ಇ. ಬೋರ್ಡ್ಸ್ ಶಾಲಾ ತಂಡವನ್ನು ಪರಾಭವಗೊಳಿಸಿದವು.ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ವಿದ್ಯಾನಗರ ಶಾಲಾ ತಂಡ 40-9 (8-1)ರಿಂದ ಕಿತ್ತೂರು ಸೈನಿಕ ಶಾಲಾ ತಂಡದ ಮೇಲೂ; ಮಂಡ್ಯದ ಕಾರ್ಮೆಲ್ ಕಾನ್ವೆಂಟ್ ತಂಡ 23-8 (10-4)ರಿಂದ ಧಾರವಾಡದ ಶಾಂತಿ ಸದನ ತಂಡದ ವಿರುದ್ಧವೂ ಜಯ ಸಾಧಿಸಿದವು.

Post Comments (+)