ಶಾಲಾ ಮಕ್ಕಳಿಗೆ ಇನ್ನೂ ಸಿಗದ ಉಚಿತ ಸೈಕಲ್

7

ಶಾಲಾ ಮಕ್ಕಳಿಗೆ ಇನ್ನೂ ಸಿಗದ ಉಚಿತ ಸೈಕಲ್

Published:
Updated:

ದಾವಣಗೆರೆ: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳಲ್ಲಿ ಪ್ರಸಕ್ತ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಇದುವರೆಗೂ ಸರ್ಕಾರ ಉಚಿತ ಬೈಸಿಕಲ್ ವಿತರಣೆ ಮಾಡಿಲ್ಲ. ಇದೇ ಶೈಕ್ಷಣಿಕ ಅವಧಿಯಲ್ಲಿ ಬೈಸಿಕಲ್ ಪಡೆಯುವ ವಿದ್ಯಾರ್ಥಿಗಳ ಆಸೆ ಕೈಗೂಡುವ ಲಕ್ಷಣಗಳಿಲ್ಲ.

ಪ್ರಸಕ್ತ ಶೈಕ್ಷಣಿಕ ಅವಧಿ ಮುಕ್ತಾಯಕ್ಕೆ ಕೆಲವೇ ದಿನಗಳು ಬಾಕಿಯಿವೆ. ಬೈಸಿಕಲ್ ಬದಲು ಹಣ ನೀಡುವ ಯೋಜನೆಗೆ ವಿರೋಧ ವ್ಯಕ್ತವಾಗಿತ್ತು. ಆಗ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಹಣದ ಬದಲು ಬೈಸಿಕಲ್ಲನ್ನೇ ವಿತರಣೆ ಮಾಡುವುದಾಗಿ ಪ್ರಕಟಿಸಿದ್ದರು. ಆದರೆ, ಶಿಕ್ಷಣ ಇಲಾಖೆಗೆ ಇದುವರೆಗೂ ಯಾವುದೇ ಆದೇಶವೂ ಬಂದಿಲ್ಲ.

“ಈ ಸಾಲಿನಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 8ನೇ ತರಗತಿಯ ವಿದ್ಯಾರ್ಥಿಗಳ ಬೇಡಿಕೆ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಲಾಗಿದೆ. ಸರ್ಕಾರಿ/ಅನುದಾನಿತ ಶಾಲೆಗಳಲ್ಲಿ ಒಟ್ಟು 20,439 ಬೈಸಿಕಲ್ ವಿತರಣೆಗೆ ಬೇಡಿಕೆ ಇಡಲಾಗಿದೆ. ಪರೀಕ್ಷೆ ಮಾರ್ಚ್‌ನಲ್ಲಿ ಪ್ರಾರಂಭವಾಗಲಿದ್ದು, ಅಷ್ಟರೊಳಗೆ ಬೈಸಿಕಲ್ ಸಿಗುವ ಸಾಧ್ಯತೆ ಕಡಿಮೆಯಿದೆ. ರಾಜ್ಯದಲ್ಲಿ ಸುಮಾರು 5 ಲಕ್ಷಕ್ಕೂ ಹೆಚ್ಚು ಬೈಸಿಕಲ್‌ಗಳ ಬೇಡಿಕೆ ಇದೆ’ ಎಂದು ಶಿಕ್ಷಣ ಇಲಾಖೆಯ ಮೂಲಗಳು ತಿಳಿಸಿವೆ.

2006-07ನೇ ಶೈಕ್ಷಣಿಕ ಸಾಲಿನಲ್ಲಿ ಬಡತನ ರೇಖೆಗಿಂತ ಕೆಳಗಿನ ಕುಟುಂಬದ ವಿದ್ಯಾರ್ಥಿಗಳಿಗೆ ಮಾತ್ರ ವಿತರಣೆ ಮಾಡಲಾಯಿತು. 2007-08ರಲ್ಲಿ ವಿದ್ಯಾರ್ಥಿನಿಯರಿಗೆ ಮಾತ್ರ ಈ ಸೌಲಭ್ಯ ದೊರೆಯಿತು. ದೂರದಿಂದ ಶಾಲೆಗೆ ಬರುವ ವಿದ್ಯಾರ್ಥಿನಿಯರಿಗೆ ಈ ಯೋಜನೆ ವರವಾಗಿತ್ತು. ‘ಈ ಯೋಜನೆ ಆರಂಭವಾದ ಮೇಲೆ ಗ್ರಾಮೀಣ ಪ್ರದೇಶದ ಶಾಲೆಗಳಲ್ಲಿ ಹಾಜರಾತಿ ಪ್ರಮಾಣ ಹೆಚ್ಚಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry