ಭಾನುವಾರ, ಮೇ 16, 2021
29 °C

ಶಾಲಾ ಮಕ್ಕಳಿಗೆ ಕ್ರೀಡಾ ರಸಪ್ರಶ್ನೆ:ಎಂಟರಂದು ಅರ್ಹತಾ ಪರೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ವರ್ಷದ ಜುಲೈ 27ರಿಂದ ಲಂಡನ್ ಒಲಿಂಪಿಕ್ಸ್ ನಡೆಯಲಿರುವುದರಿಂದ, `ಇಎಸ್‌ಪಿಎನ್ ಸ್ಟಾರ್ ಸ್ಪೋರ್ಟ್ಸ್~ ವಾಹಿನಿ ಶಾಲಾ ಮಕ್ಕಳಿಗಾಗಿ ಕ್ರೀಡಾ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿದೆ.ಟೆಲಿವಿಷನ್ ಸುತ್ತುಗಳಲ್ಲಿ ಒಟ್ಟು 72 ತಂಡಗಳು ಪಾಲ್ಗೊಳ್ಳಲಿವೆ. ಈ ತಂಡಗಳನ್ನು ಆಯ್ಕೆ ಮಾಡಲು ಏಪ್ರಿಲ್ 8ರಂದು ದೇಶದ ಪ್ರಮುಖ 23 ನಗರಗಳಲ್ಲಿ ಆರನೆಯ ತರಗತಿಯ ವಿದ್ಯಾರ್ಥಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಇದೇ ವರ್ಷದ ಜೂನ್ ಒಂದರಿಂದ ಈ ಕಾರ್ಯಕ್ರಮ ಪ್ರಸಾರವಾಗಲಿದೆ.ಕ್ರೀಡೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಖ್ಯಾತ ಒಲಿಂಪಿಯನ್ನರು ಸಹ ಈ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳನ್ನು ಕೇಳಲಿದ್ದಾರೆ. ಅರ್ಹತಾ ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು www.espnstar.comಇಲ್ಲಿ ಪಡೆಯಬಹುದು. ಇದಕ್ಕಾಗಿ ನಾಲ್ಕು ವಲಯಗಳಾಗಿ ವಿಂಗಡಣೆ ಮಾಡಲಾಗಿದೆ.  ಪೂರ್ವ: ಬೆಂಗಳೂರು, ಚೆನ್ನೈ, ಹೈದರಾಬಾದ್,  ಕೊಚ್ಚಿ, ತಿರುವನಂತಪುರ ಹಾಗೂ ವಿಶಾಖ ಪಟ್ಟಣ. ಉತ್ತರ ವಲಯ: ನವದೆಹಲಿ, ಚಂಡೀಗಡ, ಡೆಹ್ರಾಡೂನ್, ಜೈಪುರ, ಲಖನೌ, ಲೂಧಿಯಾನ. ಪಶ್ಚಿಮ: ಮುಂಬೈ, ಪುಣೆ, ಅಹಮದಾಬಾದ್, ಗ್ವಾಲಿಯರ್, ಭೋಪಾಲ್, ಪಣಜಿ. ಪೂರ್ವ: ಕೋಲ್ಕತ್ತ, ಗುವಾಹಟಿ, ಜೆಮ್‌ಷೆಡ್‌ಪುರ, ಪಟ್ನಾ, ಭುವನೇಶ್ವರ.ಪ್ರತಿ ವಲಯದಿಂದ 18 ತಂಡಗಳಂತೆ ಒಟ್ಟು 72 ತಂಡಗಳು ಟೆಲಿವಿಷನ್ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಿದ್ದು, ಪ್ರತಿ ತಂಡದಲ್ಲಿ ಇಬ್ಬರು ಸದಸ್ಯರಿರುತ್ತಾರೆ. ಈ ಕಾರ್ಯಕ್ರಮಕ್ಕೆ ಎಚ್‌ಡಿಎಫ್‌ಸಿ ಲೈಫ್ ಪ್ರಾಯೋಜಕತ್ವ ವಹಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.