ಶಾಲಾ ವಾಹನಗಳ ಡಿಕ್ಕಿ– ಇಬ್ಬರು ಬಲಿ

7

ಶಾಲಾ ವಾಹನಗಳ ಡಿಕ್ಕಿ– ಇಬ್ಬರು ಬಲಿ

Published:
Updated:

ಬೆಂಗಳೂರು: ನಗರದಲ್ಲಿ ಗುರುವಾರ ಬೆಳಿಗ್ಗೆ 20 ನಿಮಿಷಗಳ ಅಂತರದಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಶಾಲಾ ವಾಹನಗಳು ಡಿಕ್ಕಿ ಹೊಡೆದು ಎಂಟನೇ ತರಗತಿ ವಿದ್ಯಾರ್ಥಿ ಸೇರಿ ಇಬ್ಬರು ಸಾವನ್ನಪ್ಪಿದ್ದಾರೆ.ಆರ್‌ಪಿಸಿ ಲೇಔಟ್‌ನ ಕ್ಲಬ್‌ ರಸ್ತೆ ಯಲ್ಲಿ ಬೈಕ್‌ಗೆ ಶಾಲಾ ವಾಹನ ಡಿಕ್ಕಿ ಹೊಡೆದು ಸುಮುಖ್ (14) ಎಂಬ ವಿದ್ಯಾರ್ಥಿ ಮೃತಪಟ್ಟಿದ್ದಾನೆ.ಆರ್‌ಪಿಸಿ ಲೇಔಟ್‌ನ ಚಂದ್ರಶೇಖರ್‌ ಮತ್ತು ಶೀಲಾ ದಂಪತಿಯ ಮಗನಾದ ಸುಮುಖ್‌, ರಾಜಾಜಿನಗರ ಎಂಟನೇ ಅಡ್ಡರಸ್ತೆಯಲ್ಲಿರುವ ಸರ್ದಾರ್‌ ವಲ್ಲಭಬಾಯ್‌ ಪಟೇಲ್ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದ. ಬೆಳಿಗ್ಗೆ 8.10ಕ್ಕೆ ತಿಂಡಿ ತರಲು ಆಕ್ಟೀವ್‌ ಹೊಂಡಾದಲ್ಲಿ ಸಮೀಪದ ಹೋಟೆ ಲ್‌ಗೆ ಹೋಗುತ್ತಿದ್ದ ಆತ, ಮುಂದೆ ಸಾಗುತ್ತಿದ್ದ ವಿಜಯನಗರದ ‘ನ್ಯೂ ಕೇಂಬ್ರಿಡ್ಜ್‌ ಶಾಲೆ’ಯ ವಾಹನವನ್ನು ಹಿಂದಿಕ್ಕಲು ಯತ್ನಿಸಿದ್ದಾನೆ. ಈ ವೇಳೆ ಎದುರಿನಿಂದ ಆಟೊ ಬಂದಿದ್ದರಿಂದ ವಿಚಲಿತನಾದ ಆತ, ಬೈಕನ್ನು ಎಡಕ್ಕೆ ತೆಗೆದುಕೊಂಡಿದ್ದಾನೆ. ಆಗ ಶಾಲಾ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಘಟನೆಯಲ್ಲಿ ತೀವ್ರ ಗಾಯಗೊಂಡ ಆತನನ್ನು ಕೂಡಲೇ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ಕೊಂಡೊಯ್ಯಲಾ ಯಿತು. ಆದರೆ, ಆತ ಮಾರ್ಗಮಧ್ಯೆ ಮೃತಪಟ್ಟಿರುವುದನ್ನು ವೈದ್ಯರು ದೃಢ ಪಡಿಸಿದರು. ಮೃತನ ಜೇಬಿನಲ್ಲಿದ್ದ ಮೊಬೈಲ್‌ನಿಂದ ತಂದೆ ಚಂದ್ರಶೇಖರ್‌ ಅವರನ್ನು ಸಂಪರ್ಕಿಸಿ ವಿಷಯ ತಿಳಿಸ ಲಾಯಿತು. ಕೂಡಲೇ ಅವರು ಪತ್ನಿ ಯೊಂದಿಗೆ ಆಸ್ಪತ್ರೆಗೆ ಬಂದರು. ಆದರೆ, ‘ಮಗ ಕೇವಲ ಗಾಯಗೊಂಡಿದ್ದಾನೆ. ಆತ ಸಾವನ್ನಪ್ಪಿಲ್ಲ. ನೀವು ಸುಳ್ಳು ಹೇಳುತ್ತಿದ್ದೀರಿ’ ಎಂದು ದುಃಖತಪ್ತರಾಗಿ ಹೇಳುತ್ತಿದ್ದ ಶೀಲಾ ಅವರು ವಾಸ್ತ ವವನ್ನು ಒಪ್ಪಿಕೊಳ್ಳಲು ಸಿದ್ಧರಿರಲಿಲ್ಲ ಎಂದು ಪೊಲೀಸರು ತಿಳಿಸಿದರು.‘ಘಟನೆ ನಂತರ ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದ. ಶಾಲಾ ಆಡಳಿತ ಮಂಡಳಿಗೆ ಕರೆ ಮಾಡಿ ವಾಹ ನದಲ್ಲಿದ್ದ ಎಂಟು ಮಕ್ಕಳನ್ನು ಸುರಕ್ಷಿ ತವಾಗಿ ಮನೆಗೆ ಕಳುಹಿಸ ಲಾಯಿತು. ಮಧ್ಯಾಹ್ನ ಆರೋಪಿ ಚಾಲಕನನ್ನು ವಶಕ್ಕೆ ಪಡೆಯಲಾಯಿತು. ಸುಮುಖ್‌ ಬಳಿ ಚಾಲನಾ ಪರವಾನಗಿ ಇರಲಿಲ್ಲ. ಅಲ್ಲದೆ ಘಟನೆ ವೇಳೆ ಆತ ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ’ ಎಂದು ವಿಜಯ ನಗರ ಸಂಚಾರ ಪೊಲೀಸರು ಮಾಹಿತಿ ನೀಡಿದ್ದಾರೆ.ಚಂದ್ರಶೇಖರ್‌ ಅವರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾ ನೆಯೊಂದರಲ್ಲಿ ಎಂಜಿನಿಯರ್‌ ಆಗಿ ದ್ದಾರೆ. ಪತ್ನಿ ಶೀಲಾ ಗೃಹಿಣಿಯಾಗಿದ್ದು, ದಂಪತಿಗೆ ಸುಮುಖ್‌ ಎರಡನೇ ಮಗ.ಮತ್ತೊಂದು ಪ್ರಕರಣ: ಮೊದಲ ಅಪಘಾತ ಸಂಭವಿಸಿದ 20 ನಿಮಿಷಗಳ ನಂತರ ಮೈಕೊಲೇಔಟ್‌ ಸಮೀಪದ ಎನ್‌.ಎಸ್.ಪಾಳ್ಯದಲ್ಲಿ ಶಾಂತಿನಿಕೇತನ ಶಾಲೆಯ ಬಸ್‌ ಹರಿದು ಟಿ.ಶಿವಕು ಮಾರ್ (22) ಎಂಬುವರು ಸಾವನ್ನ ಪ್ಪಿದರು.ಜೆ.ಪಿ.ನಗರ ಸಮೀಪದ ವಿನಾಯ ಕನಗರ ನಿವಾಸಿಯಾದ ಶಿವಕುಮಾರ್, ಬಿಟಿಎಂ ಲೇಔಟ್‌ನ 29ನೇ ರಸ್ತೆ ಯಲ್ಲಿನ ಖಾಸಗಿ ಕಂಪೆನಿಯೊಂ ದರಲ್ಲಿ ಟೆಕ್ನೀಷಿಯನ್‌ ಆಗಿದ್ದರು. ಬೆಳಿಗ್ಗೆ 8.30ರ ಸುಮಾರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುವಾಗ ಎನ್‌.ಎಸ್‌.ಪಾಳ್ಯ ಮುಖ್ಯರಸ್ತೆಯಲ್ಲಿ ಏಕಾಏಕಿ ಪಾದಚಾ ರಿಯೊಬ್ಬರು ವಾಹನಕ್ಕೆ ಅಡ್ಡ ಬಂದಿ ದ್ದಾರೆ.ಈ ವೇಳೆ ನಿಯಂತ್ರಣ ಕಳೆದು ಕೊಂಡು ಅವರು ಕೆಳಗೆ ಬೀಳುತ್ತಿ ದ್ದಂತೆಯೇ ಹಿಂದಿನಿಂದ ಬಂದ ಶಾಲಾ ವಾಹನ ಅವರ ಮೇಲೆ ಹರಿದಿದೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಲ್ಲಿ ತೀವ್ರ ರಕ್ತಸ್ರಾವವಾಗಿ ಶಿವಕುಮಾರ್‌ ಸ್ಥಳದಲ್ಲೇ ಸಾವನ್ನ ಪ್ಪಿದ್ದಾರೆ. ಚಾಲಕ ತಿಮ್ಮೇಗೌಡನನ್ನು ವಶಕ್ಕೆ ಪಡೆಯಲಾಗಿದೆ. ಬಿಳೇಕಹ ಳ್ಳಿಯಲ್ಲಿರುವ ಶಾಂತಿನಿಕೇತನ ಶಾಲೆಗೆ ಸೇರಿದ ಆ ವಾಹನದಲ್ಲಿ ಶಿಕ್ಷಕರನ್ನು ಶಾಲೆಗೆ ಕರೆದೊಯ್ಯಲಾಗುತ್ತಿತ್ತು ಎಂದು ಪೊಲೀಸರು ಹೇಳಿದ್ದಾರೆ.ಮೂರೂವರೆ ತಿಂಗಳಲ್ಲಿ ಶಾಲಾ ವಾಹನಗಳಿಂದ ಸಾವನ್ನಪ್ಪಿದವರ ವಿವರ

ಡಿ.06: ಬಾಬುಸಾಪಾಳ್ಯ ಬಸ್‌ ನಿಲ್ದಾಣದ ಬಳಿ ಶಾಲಾ ವಾಹನ ಡಿಕ್ಕಿ ಹೊಡೆದು  ರಜನೀಶ್ ಕುಮಾರ್ ಶುಕ್ಲಾ (25) ಮತ್ತು ಬ್ರಿಜೇಶ್ ಕುಮಾರ್ ಯಾದವ್ (33) ಎಂಬುವರು ಮೃತಪಟ್ಟಿದ್ದರು.

ಡಿ. 04: ಶಾಂತಿನಗರದ ಔಟ್‌ರೀಚ್‌ ಶಾಲೆ ಆವರಣದಲ್ಲಿ ಆಟವಾಡುತ್ತಿದ್ದ ಒಂದನೇ ತರಗತಿ ವಿದ್ಯಾರ್ಥಿ ಮನೀಷ್‌ಗೆ ಅದೇ ಶಾಲೆಯ ವಾಹನ ಡಿಕ್ಕಿ ಹೊಡೆದಿತ್ತು. ಆತ ಸ್ಥಳದಲ್ಲೇ ಸಾವನ್ನಪ್ಪಿದ್ದ.ಸೆ.27: ನಾಯಂಡಹಳ್ಳಿ ಜಂಕ್ಷನ್‌ನಲ್ಲಿ ನ್ಯಾಷನಲ್ ಹಿಲ್‌ವಿವ್‌ ಪಬ್ಲಿಕ್ ಶಾಲೆಯ ಬಸ್‌ ಡಿಕ್ಕಿ ಹೊಡೆದು ವಿಜಯನಗರ ಮಾರುತಿಮಂದಿರ ವಾರ್ಡ್ ಸದಸ್ಯ ವಿ. ವಾಗೀಶ್ ಅವರ ಪುತ್ರ ತೇಜಸ್ (17)  ಮೃತಪಟ್ಟಿದ್ದ.ಸೆ. 13: ಮೂಡಲಪಾಳ್ಯ ವೃತ್ತದಲ್ಲಿ ನ್ಯಾಷನಲ್‌ ಹಿಲ್‌ ವಿವ್‌ ಶಾಲೆಯ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ರವಿಕಿರಣ್ (20) ಎಂಬ ಬಿ.ಕಾಂ ವಿದ್ಯಾರ್ಥಿ ಸಾವನ್ನಪ್ಪಿದ್ದ.ಶೀಘ್ರ ಪೋಷಕರ ವಿಚಾರಣೆ

‘ಸಾರ್ವಜನಿಕ ಸ್ಥಳಗಳಲ್ಲಿ ಬೈಕ್‌  ಚಾಲನೆ ಮಾಡುವವರಿಗೆ 18 ವರ್ಷ ತುಂಬಿರಬೇಕು. ಅಂತೆಯೇ ಸ್ಕೂ ಟರ್‌ (ಗೇರ್‌ರಹಿತ ವಾಹನ) ಚಾಲನೆ ಮಾಡುವವರಿಗೆ 16 ವರ್ಷ ಪೂರ್ಣ­ಗೊಂಡಿರಬೇಕು ಎಂದು 1988ರ ಮೋಟಾರು ವಾಹನ ಕಾಯ್ದೆಯ ಸೆಕ್ಷನ್‌ 4ರಲ್ಲಿ ತಿಳಿಸಲಾಗಿದೆ. ಹೀಗಾ­ಗಿ 16 ವರ್ಷ ಪೂರ್ಣ­ಗೊಳ್ಳ­ದೆ ಸ್ಕೂಟರ್‌ ಅನ್ನು ರಸ್ತೆಗೆ ತಂದಿದ್ದರಲ್ಲಿ ಸುಮುಖ್‌ನ ತಪ್ಪಿದೆ. ಕಾನೂನಿನ ಪ್ರಕಾರ ಆತನ ಪೋಷಕರ ವಿರುದ್ಧ ಅಥವಾ ಸ್ಕೂಟರ್‌ ಮಾಲೀ­ಕ­ರ ವಿರು­ದ್ಧ ಕ್ರಮ ಕೈಗೊಳ್ಳಬೇ­ಕಾಗು­ತ್ತದೆ. ಘಟನೆಯಿಂದ ಅವರು ಆಘಾತಕ್ಕೊ­ಳ­ಗಾಗಿದ್ದು, ಮುಂದಿನ ದಿನಗಳಲ್ಲಿ ವಿಚಾರಣೆಗೆ ಒಳಪಡಿಸ­ಲಾಗುವುದು’

– ಎಸ್.ಗಿರೀಶ್ ಡಿಸಿಪಿ, ಸಂಚಾರ ಪಶ್ಚಿಮ ವಿಭಾಗ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry