ಶಾಲಾ ವಾಹನ ಚಾಲಕರು, ನಿರ್ವಾಹಕರ ಪ್ರತಿಭಟನೆ

7

ಶಾಲಾ ವಾಹನ ಚಾಲಕರು, ನಿರ್ವಾಹಕರ ಪ್ರತಿಭಟನೆ

Published:
Updated:

ಮಹದೇವಪುರ: ಸಮೀಪದ ಕುಂದಲಹಳ್ಳಿಯ ರೇಯಾನ್ ಇಂಟರ್‌ನ್ಯಾಷನಲ್ ಶಾಲೆಯ ಆಡಳಿತ ಮಂಡಳಿ ಮುನ್ಸೂಚನೆ ನೀಡದೆ ತಮ್ಮನ್ನು ಕೆಲಸದಿಂದ ವಜಾಗೊಳಿಸಿದೆ ಎಂದು ಆರೋಪಿಸಿ ಶಾಲೆಯ ವಾಹನಗಳ ಚಾಲಕರು ಹಾಗೂ ನಿರ್ವಾಹಕರು ಒಂದು ತಿಂಗಳಿಂದ ಮೌನ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.‘ಕಳೆದ ಹದಿನೈದು ವರ್ಷಗಳಿಂದ ಶಾಲೆಯಲ್ಲಿ 170 ಚಾಲಕರು ಮತ್ತು ನಿರ್ವಾಹಕರು ಕಾರ್ಯನಿರ್ವ ಹಿಸುತ್ತಿದ್ದಾರೆ. ಎಲ್ಲರನ್ನು ಕಳೆದ ಆಗಸ್ಟ್ 9ರಂದು ಯಾವುದೇ ಮುನ್ಸೂಚನೆ ನೀಡದೇ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ. ವಜಾಗೊಳಿಸಿದ ಕುರಿತು ಯಾವುದೇ ಮಾಹಿತಿಯನ್ನು ಶಾಲೆ ನೀಡುತ್ತಿಲ್ಲ. ಇದರಿಂದಾಗಿ ಚಾಲಕರ ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ’ ಎಂದು ರೇಯಾನ್‌ ಶಾಲಾ ವಾಹನ ಚಾಲಕರು ಮತ್ತು ನಿರ್ವಾಹಕರ ಸಂಘದ ಅಧ್ಯಕ್ಷ ರವಿಕುಮಾರ್ ದೂರಿದರು.‘ಕಾರ್ಮಿಕರಿಗೆ ಸಿಗಬೇಕಾದ ಯಾವ ಸೌಲಭ್ಯಗಳನ್ನೂ ಈವರೆಗೆ ಶಾಲೆ ನಮಗೆ ನೀಡಿಲ್ಲ. ಅಲ್ಲದೆ ಕೆಲಸದಿಂದ ವಜಾಗೊಳಿಸುವಂಥ ಕಾರ್ಯವನ್ನೂ ನಾವು ಮಾಡಿಲ್ಲ. ಹೀಗಾಗಿ ವಜಾಗೊಳಿ ಸಿರುವ ಚಾಲಕರು ಮತ್ತು ನಿರ್ವಾಹಕ ರನ್ನು ಮರಳಿ ಕೆಲಸಕ್ಕೆ ಸೇರಿಸಿಕೊಳ್ಳ ಬೇಕು. ಇಲ್ಲದಿದ್ದಲ್ಲಿ ಶಾಲೆಯ ಎದುರೇ ಎಲ್ಲಾ ಚಾಲಕರು ವಿಷ ಕುಡಿದು ಆತ್ಯಹತ್ಯೆಗೆ ಮುಂದಾಗ ಬೇಕಾಗುತ್ತದೆ’ ಎಂದು ಅವರು ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry