ಶನಿವಾರ, ಅಕ್ಟೋಬರ್ 19, 2019
27 °C

ಶಾಲೆಗಳಲ್ಲಿ ಅಗ್ನಿನಂದಕ ಅಳವಡಿಕೆ ಕಡ್ಡಾಯ

Published:
Updated:

ಬೆಂಗಳೂರು: ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪ್ರಕಾರ ರಾಜ್ಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ಆವರಣದಲ್ಲಿ ಅಗ್ನಿನಂದಕಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.   ಇಲಾಖೆಯಿಂದ ಈ ಬಗ್ಗೆ  ಈಗಾಗಲೆ ಸೂಚನೆ ನೀಡಿದ್ದರೂ ಹಲವಾರು ಶಾಲೆಗಳು ಇದನ್ನು ಪಾಲಿಸಿರುವುದಿಲ್ಲ. ಆದ್ದರಿಂದ ಅನುದಾನಿತ, ಅನುದಾನ ರಹಿತ ಶಾಲೆಗಳೂ ಸಹ ಈ ನೋಟೀಸನ್ನು ಪ್ರಕಟಿಸಿದ ದಿನಾಂಕದಿಂದ 15 ದಿನದ ಒಳಗಾಗಿ ಐ.ಎಸ್.ಐ. ಮಾರ್ಕ್ ಉಳ್ಳ ಉತ್ತಮ ಗುಣಮಟ್ಟ, ಸಾಮರ್ಥ್ಯದ ಅಗ್ನಿನಂದಕ ಉಪಕರಣವನ್ನು ಪ್ರತಿಯೊಂದು ಬ್ಲಾಕ್‌ಗೆ ಒಂದರಂತೆ ಅಳವಡಿಸಲು ಸೂಚಿಸಿದೆ.  ತಪ್ಪಿದ್ದಲ್ಲಿ ಕಟ್ಟುನಿಟ್ಟಿನ ಕ್ರಮ ಜರುಗಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಅಂತಿಮವಾಗಿ ಎಚ್ಚರಿಸಿದ್ದಾರೆ.

Post Comments (+)