ಶಾಲೆಗಳಿಗೆ ಸಂಸದರ ಅನುದಾನ: ಅನುಮತಿ

7
ಮಾರ್ಗದರ್ಶಿ ಸೂತ್ರಗಳಿಗೆ ತಿದ್ದುಪಡಿ

ಶಾಲೆಗಳಿಗೆ ಸಂಸದರ ಅನುದಾನ: ಅನುಮತಿ

Published:
Updated:

ನವದೆಹಲಿ: ಶಾಲೆಗಳ ಪೀಠೋಪ ಕರಣ ಖರೀದಿ ಹಾಗೂ ಸಹಕಾರಿ ಸಂಸ್ಥೆಗಳಿಗೆ ಮೂಲಸೌಕರ್ಯ ನಿರ್ಮಿಸಿಕೊಳ್ಳಲು ಇನ್ನುಮುಂದೆ ಸಂಸದರು ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಿಂದ ಅನುದಾನವನ್ನು ನೀಡಬಹುದಾಗಿದೆ.ಯೋಜನೆಯ ಮಾರ್ಗದರ್ಶಿ ಸೂತ್ರಗಳಿಗೆ ಇದೀಗ ತಿದ್ದುಪಡಿ ಮಾಡಲಾಗಿದ್ದು, ಸರ್ಕಾರಿ ಇಲ್ಲವೆ ಅನುದಾನಕ್ಕೆ ಒಳಪಟ್ಟ ಶಾಲೆಗಳಿಗೆ ಅಗತ್ಯವಾದ ಪೀಠೋಪಕರಣ ಖರೀದಿಸಲು ಅನುದಾನ (ವರ್ಷಕ್ಕೆ ಗರಿಷ್ಠ ರೂ 50 ಲಕ್ಷವರೆಗೆ) ನೀಡಬಹುದಾಗಿದೆ.ಪ್ರಮಾಣಿತ ಸಹಕಾರಿ ಸಂಸ್ಥೆಗಳಿಗೆ ಅಗತ್ಯವಾದ ಕಟ್ಟಡ ಮತ್ತಿತರ ಮೂಲಸೌಕರ್ಯಗಳನ್ನು ಒದಗಿಸಲು  ಅನುದಾನ (ವರ್ಷಕ್ಕೆ ಗರಿಷ್ಠ ರೂ 1 ಕೋಟಿವರೆಗೆ ) ಒದಗಿಸಲು ಸಹ ಇದೀಗ ಅವಕಾಶ ನೀಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry