ಶಾಲೆಗಳು ಜಾನಪದ ಕಲಾ ಕೇಂದ್ರಗಳಾಗಲಿ

ಭಾನುವಾರ, ಜೂಲೈ 21, 2019
25 °C

ಶಾಲೆಗಳು ಜಾನಪದ ಕಲಾ ಕೇಂದ್ರಗಳಾಗಲಿ

Published:
Updated:

 ನೆಲಮಂಗಲ: `ಸಂಸ್ಕೃತಿಯ ಭಾಗವಾದ ಜಾನಪದ ಕಲೆಗಳನ್ನು ಶಾಲಾ ಕಾಲೇಜು ಮಕ್ಕಳಿಗೆ ಕಲಿಸುವ ಮೂಲಕ ಅಳಿಸಿ ಹೋಗುತ್ತಿರುವ ಕಲೆಯನ್ನು ಉಳಿಸಬೇಕು. ಸೃಜನಾತ್ಮಕತೆ ಬಿಂಬಿಸುವ ಈ ಕಲೆಗಳು ಮಕ್ಕಳಲ್ಲಿನ ಪ್ರತಿಭಾ ಸಂಪನ್ನತೆಗೆ ಪೂರಕವಾಗುತ್ತವೆ~ ಎಂದು ಸಿದ್ದಗಂಗಾ ಪಬ್ಲಿಕ್ ಶಾಲೆಯ ಅಧ್ಯಕ್ಷ ಪಿ. ನಾರಾಯಣಪ್ಪ ಹೇಳಿದರು.ಇಲ್ಲಿಗೆ ಸಮೀಪದ ಕುದುರೆಗೆರೆಯ ಸಿದ್ದಗಂಗಾ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಶ್ಯಾಕಲದೇವನಪುರದ ಜಾನಪದ ಸಾಂಸ್ಕೃತಿಕ ಕಲಾ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಜನಪದ ಸಂಗೀತ ಮತ್ತು ನೃತ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಿ ಅವರು ಮಾತನಾಡಿದರು. ಆಲೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಟಿ.ಕೃಷ್ಣಮೂರ್ತಿ, ತಾ.ಪಂ.ಸದಸ್ಯೆ ರಂಗಮ್ಮ ನಾಗರಾಜು, ಶಿಬಿರದ ಸಂಚಾಲಕಿ ಸುಶೀಲಮ್ಮ, ನಿರ್ದೇಶಕ ಶ್ಯಾಕಲದೇವನಪುರ ರಾಮಚಂದ್ರ ಮಾತನಾಡಿದರು.

ಮುಖ್ಯ ಶಿಕ್ಷಕಿ ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು. ತರಬೇತಿ ಪಡೆದ 28 ಶಿಬಿರಾರ್ಥಿಗಳು ಕಲಾ ಪ್ರದರ್ಶನ ನೀಡಿದರು. ಎಸ್.ಟಿ.ಹನುಮಂತರಾಯಪ್ಪ, ಮಂಜುಮಣಿ, ಎಸ್.ಮರಿಸ್ವಾಮಿ, ಲೀಲಾವತಿ, ಡಿ.ಎಂ.ರಮೇಶ್ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry