ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ

7

ಶಾಲೆಗೆ ಕಾಂಪೌಂಡ್ ನಿರ್ಮಾಣಕ್ಕೆ ಆಗ್ರಹ

Published:
Updated:

ಚಿತ್ರದುರ್ಗ: ನಗರದ ವಿಪಿ ಬಡಾವಣೆಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆ ನಿರ್ಮಾಣ ಮಾಡಬೇಕು ಎಂದು ವಿಪಿ ಮತ್ತು ಜೆಸಿಆರ್ ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.



ಶಾಲೆ ಉತ್ತಮ ಕಟ್ಟಡ ಹೊಂದಿದ್ದು, ವಿಸ್ತಾರವಾದ ಆಟದ ಮೈದಾನವಿದೆ. ಸುಮಾರು ವರ್ಷಗಳ ಹಳೆದಾದ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಆನೇಕರು ವಿವಿಧ ಉನ್ನತ ಹುದ್ದೆಗಳಲ್ಲಿದ್ದಾರೆ. ಕೆಲವರು ವಿದೇಶಗಳಿಗೆ ಹೋಗಿ ವಿದ್ಯಾಭ್ಯಾಸ ಮಾಡಿರುವ ಉದಾಹರಣೆಗಳಿವೆ. ಆದರೆ, ಪ್ರಸ್ತುತ ಶಾಲಾ ಆವರಣ ಗೋಡೆ ಇಲ್ಲದೇ ಜಾನುವಾರುಗಳ ಆಶ್ರಯತಾಣ ಆಗಿ ಮಾರ್ಪಾಡಾಗಿದೆ. ಅನೈತಿಕ ಚಟುವಟಿಕೆಗಳು ನಡೆಯುತ್ತಿರುವುದು ಕಂಡುಬಂದಿದೆ ಎಂದು ನಿವಾಸಿಗಳು ಪ್ರಕಟಣೆಯಲ್ಲಿ ದೂರಿದ್ದಾರೆ. 



ಶಾಲೆ ಆವರಣದಲ್ಲಿ ಗೋಡೆಯ ಬದಲಾಗಿ ಕೆಲವು ಕಡೆಗಳಲ್ಲಿ ಕಲ್ಲಿನ ಚಪ್ಪಡಿಗಳನ್ನು ನೆಡಲಾಗಿದೆ. ಚಪ್ಪಡಿಯ ಪಕ್ಕದಲ್ಲಿಯೇ ಕೆಲವರು ಕಸವನ್ನು ಹಾಕುತ್ತಿರುವುದರಿಂದ ಮಕ್ಕಳ ಮತ್ತು ಸ್ಥಳೀಯರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ತಿಳಿಸಿದ್ದಾರೆ.



ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಶಾಲಾ ಆವರಣ ಗೋಡೆ ನಿರ್ಮಾಣಕ್ಕೆ ಮುಂದಾಗಿ ಶಾಲೆಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಸ್ಥಳೀಯರಾದ ಪುಟ್ಟಸ್ವಾಮಿ, ಸುರೇಶ್‌ಬಾಬು, ಎಪಿಎಂಸಿ ಮಾಜಿ ಅಧ್ಯಕ್ಷ ತಿಮ್ಮಣ್ಣ, ರಾಮಮೂರ್ತಿ, ಅನಂತ್, ಕಾಂತರೆಡ್ಡಿ, ಶ್ರೀನಿವಾಸ್, ವಿರೂಪಾಕ್ಷಪ್ಪ ಕೋರ್ದ್ದಿದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry