ಸೋಮವಾರ, ಜನವರಿ 20, 2020
19 °C

ಶಾಲೆಗೆ ಪೋಷಕರ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: ನಗರದ ಸಿಡಿಒ ಜೈನ್‌ ಶಾಲೆಯ ಮಕ್ಕಳಿಗೆ ಆಡಳಿತ ಮಂಡಳಿ ಸದಸ್ಯರೊಬ್ಬರು ಥಳಿಸಿದ್ದಾರೆ ಎಂದು ಆರೋಪಿಸಿ ಪೋಷಕರು ಬುಧವಾರ ಶಾಲೆಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.ಆಡಳಿತ ಮಂಡಳಿ ಸದಸ್ಯ ಕುಮಾರ ಲಾಲಕ ಎಂಬುವರು ಕೆಲ ದಿನಗಳ ಹಿಂದೆ ಶಾಲೆಯ ಮಕ್ಕಳಿಗೆ ತೀವ್ರವಾಗಿ ಥಳಿಸಿದ್ದರು ಎನ್ನ ಲಾಗಿದೆ. ಈ ವಿಷಯವನ್ನು ಮಕ್ಕಳು ಪೋಷಕರ ಗಮನಕ್ಕೆ ತಂದರು. ಬೆಳಿಗ್ಗೆ ಶಾಲೆಗೆ ಆಗಮಿಸಿದ ಪೋಷಕರು ಶಿಕ್ಷಕರು ಮತ್ತು ಆಡಳಿತ ಮಂಡಳಿ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.ಕೂಡಲೇ ಸದಸ್ಯರನ್ನು ವಜಾ ಮಾಡಬೇಕು ಎಂದು ಪಟ್ಟು ಹಿಡಿದರು. ಆಡಳಿತ ಮಂಡಳಿ ಮತ್ತು ಪೋಷಕರ ನಡುವೆ ಮಾತಿನ ಚಕಮಕಿ ನಡೆಯಿತು. ಮುಂದೆ ಈ ರೀತಿಯ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸು ವುದಾಗಿ ಆಡಳಿತ ಮಂಡಳಿ ಭರವಸೆ ನೀಡಿದ ಬಳಿಕ ಪೋಷಕರು ಸಮಾಧಾನಗೊಂಡರು.

ಪ್ರತಿಕ್ರಿಯಿಸಿ (+)