ಶಾಲೆಗೆ ಬಾರದ ಶಿಕ್ಷಕರು!

7

ಶಾಲೆಗೆ ಬಾರದ ಶಿಕ್ಷಕರು!

Published:
Updated:

ಶಹಾಪುರ: ತಾಲ್ಲೂಕಿನ ಕೊಂಗಂಡಿ(ಎಸ್‌) ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಚ್ಚಿನ ಶಿಕ್ಷಕರು ಶಾಲೆಗೆ  ಬರುತ್ತಿಲ್ಲವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.1ರಿಂದ 8ನೇ ತರಗತಿಯವರಿಗೆ ಶಾಲೆಯಿದ್ದು 150ಕ್ಕೂ ಹೆಚ್ಚು ಮಕ್ಕಳಿದ್ದಾರೆ. ಶಾಲೆ ಮುಖ್ಯಗುರು ವಾರಕ್ಕೆ ಒಮ್ಮೆ ಆಗಮಿಸಿ ಹಾಜರಾತಿ  ಪುಸ್ತಕಕ್ಕೆ ಸಹಿ ಹಾಕಿ  ಮರೆಯಾಗುತ್ತಿದ್ದಾರೆ.ಮಧ್ಯಾಹ್ನದ ಬಿಸಿಯೂಟ ಹಾಕುವುದನ್ನು ಸ್ಥಗಿತಗೊಳಿಸಿದ್ದಾರೆ ಕ್ಷೀರಭಾಗ್ಯ  ಯೋಜನೆ ಬಂದಿಲ್ಲ. ಶಾಲೆ ಮುಂದುಗಡೆ ಇರುವ ಬೊರ್‌ವೆಲ್‌ ಕೆಟ್ಟು ಹೋಗಿದ್ದು  ಕುಡಿಯುವ ನೀರಿನ ಸಮಸ್ಯೆ ಉಂಟಾಗಿದೆ. ಶಾಲೆಗೆ ಬಾರದ ಶಿಕ್ಷಕರ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಶಾಲೆಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಗ್ರಾಮದ ಮುಖಂಡ ಮಾನಪ್ಪ ಹೊಸ್ಮನಿ, ತಿಮ್ಮರಡ್ಡಿ, ದ್ಯಾವಣ್ಣ ಮುತ್ತಿತರರು ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry